ಬಾಗಲಕೋಟೆ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಳಿ ಇರುವ ಬಾದಾಮಿ ಅಗಸ್ತ್ಯ ತೀರ್ಥ ಹೊಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸತ್ತು ಬಿದ್ದಿವೆ.
ಬಾದಾಮಿ ಗುಹಾಲಯ ಹಾಗೂ ಭೂತನಾಥ ದೇವಾಲಯದ ಮುಂದೆ ಇರುವ ಹೊಂಡದಲ್ಲಿ ಇತ್ತೀಚಿಗೆ ಮಳೆ ಆದ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ಸಾಗಾಣಿಕೆ ಅನುಕೂಲಕರವಾಗಿತ್ತು. ಆದರೆ ಏಕಾಏಕಿ ಹೀಗೆ ಮೀನುಗಳು ಮೃತ ಪಟ್ಟಿರುವುದು ಸಂಶಯ ಮೂಡಿಸಿದೆ.
ಮಳೆಯಿಂದಾಗಿ ಹೊಸ ನೀರು ಬಂದಿತ್ತು. ಆದರೆ ಹೀಗೆ ಮೃತ ಪಡಬೇಕಾದರೆ, ಯಾರಾದರೂ ವಿಷ ಪದಾರ್ಥ ಹಾಕಿದ್ದಾರೆಯೇ ಅಥವಾ ಮಳೆ ನೀರಿನಲ್ಲಿ ಏನಾದರೂ ವಿಷ ಪದಾರ್ಥ ಸೇರಿದೆಯೇ ಎಂಬುದನ್ನು ತನಿಖೆಯಿಂದ ತಿಳಿಯಬೇಕಾಗಿದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.