ಬಾಗಲಕೋಟೆ: ನಿನ್ನೆ ಸಂಜೆ ಸಾರಿಗೆ ಸಚಿವ, ಡಿಸಿಎಂ ಲಕ್ಷಣ್ ಸವದಿ ಅವರ ಪುತ್ರ ಚಿದಾನಂದ ಸವದಿ ಕಾರು ಡಿಕ್ಕಿಯಾಗಿ ಹುನಗುಂದ ತಾಲೂಕಲ್ಲಿ ರೈತ ಮೃತಪಟ್ಟಿದ್ದಾನೆ. ಸವದಿ ಪುತ್ರ ಮಾನವೀಯತೆ ಮರೆತವರಂತೆ ವರ್ತಿಸಿದ್ರು ಎಂದು ರೈತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕುಮಾರೇಶ್ವರ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮೃತನ ಕುಟುಂಬಸ್ಥರು, ಸಚಿವರ ಪುತ್ರರಾಗಿದ್ದುಕೊಂಡು ಮಾನವೀಯತೆ ಇಲ್ಲದೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಅಪಘಾತ ನಡೆದಾಗ ಕಾರಿನ ನಂಬರ್ ಪ್ಲೇಟ್ ತೆಗೆದು ಹಾಕಿ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಓದಿ : ಹುನಗುಂದ ಬಳಿ ಡಿಸಿಎಂ ಲಕ್ಷಣ್ ಸವದಿ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು
ಒಬ್ಬ ಜನಪ್ರತಿನಿಧಿಯ ಪುತ್ರನಾಗಿದ್ದುಕೊಂಡು ಮಾನವೀಯತೆ ದೃಷ್ಠಿಯಿಂದ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಮಾಡಿಲ್ಲ ಎಂದು ಮೃತನ ಕುಟುಂಬಸ್ಥರು ಲಕ್ಷಣ ಸವದಿ ಪುತ್ರನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.