ಬಾಗಲಕೋಟೆ: ಜಿಲ್ಲೆಯ ಮಾದರಿ ಪೊಲೀಸ್ ಠಾಣೆಯಾದ ಮುಧೋಳ ಪೊಲೀಸ್ ಠಾಣೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಭೇಟಿ ನೀಡಿ,ಪರಿಶೀಲನೆ ನಡೆಸಿದರು.
ಠಾಣೆಯಲ್ಲಿ ವಿವಿಧ ಬಗೆಯ ಕಾರ್ಯಗಳನ್ನು ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಎಲ್ಲ ವಿಷಯವನ್ನೂ ಕೂಲಂಕಷವಾಗಿ ಚರ್ಚಿಸಿದರು. ಠಾಣೆಯ ಅಧಿಕಾರಿಗಳು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿದರು.
ಈ ಠಾಣೆಯು ಅಪರಾಧ ಪ್ರಕರಣಗಳ ಪತ್ತೆ, ಸಮನ್ಸ್ ಜಾರಿ, ಕಳವು ವಸ್ತುಗಳ ಪತ್ತೆ, ಸ್ವಚ್ಛತೆ ನಿರ್ವಹಣೆಯಲ್ಲಿ ಮಾದರಿ ಪೊಲೀಸ್ ಠಾಣೆ ಎಂದು ಪ್ರಶಸ್ತಿ ಪಡೆದಿದೆ. ಇದೇ ಮಾದರಿಯಲ್ಲಿ ಎಲ್ಲಾ ಠಾಣೆಗಳು ಕಾರ್ಯನಿರ್ವಹಿಸಿ, ಜನಸ್ನೇಹಿಯಾಗಿರಬೇಕು ಎಂದು ಡಿಸಿಎಂ ತಿಳಿಸಿದರು.
ಸಂದರ್ಭದಲ್ಲಿ ರಾಮಣ್ಣ ತಳೆವಾಡ, ಬಿಜೆಪಿ ಅಧ್ಯಕ್ಷ ಕುಮಾರ ಹುಲಕುಂದ, ಡಿಎಸ್‌ಪಿ ಆರ್ ಕೆ ಪಾಟೀಲ್, ಸಿಪಿಐ ಹೆಚ್ ಆರ್ ಪಾಟೀಲ್, ಪಿಎಸ್ಐ ಬಿರಾದರ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.