ETV Bharat / state

ಯಡಿಯೂರಪ್ಪ ಸಿಎಂ ಆದ್ರೆ ಮಳೆ-ಪ್ರವಾಹ, ಸಿದ್ದು ಸಿಎಂ ಆದ್ರೆ ಬರ: ಡಿಸಿಎಂ ಕಾರಜೋಳ

author img

By

Published : Jan 19, 2021, 10:58 PM IST

ಯಡಿಯೂರಪ್ಪ ಕಾಲ್ಗುಣದ ವೈಶಿಷ್ಟ್ಯ ಅಂದರೆ ಅವರು ಸಿಎಂ ಆದಾಗ ಮಳೆ ಜಾಸ್ತಿಯಾಗುತ್ತದೆ. ಸಿದ್ದರಾಮಯ್ಯ ಸಿಎಂ ಆದಾಗ ಬರಗಾಲ ಬರುತ್ತದೆ ಎಂದು ಡಿಸಿಎಂ ಕಾರಜೋಳ ವ್ಯಂಗ್ಯವಾಡಿದ್ದಾರೆ.

dcm-govinda-karajola-talk-about-cm-yadiyurappa-news
ಡಿಸಿಎಂ ಕಾರಜೋಳ

ಬಾಗಲಕೋಟೆ: ಯಡಿಯೂರಪ್ಪ ಸಿಎಂ ಆದರೆ ಪ್ರವಾಹ, ಮಳೆ ಕಾಟ ಶುರುವಾಗುತ್ತದೆ. ಸಿದ್ದರಾಮಯ್ಯ ಸಿಎಂ ಆದಾಗ ಬರಗಾಲ ಬರುತ್ತದೆ ಎಂದು ಡಿಸಿಎಂ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಓದಿ: ಕ್ರಿಯಾ ಯೋಜನೆ ರೂಪಿಸಲು ಕುಲಪತಿಗಳಿಗೆ 15 ದಿನ ಗಡುವು‌ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ

ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯಡಿಯೂರಪ್ಪ ಸಿಎಂ ಆದಾಗ ಭೂಮಿ ತುಂಬ ನೀರು ಇರುತ್ತದೆ. ಒಣ ಬರ ಬೀಳೋದಿಲ್ಲ ಹಸಿ ಬರ ಬೀಳುತ್ತದೆ. ಹಸಿ ಬರ ಬಿದ್ದರೆ ಜನರ ಜೊತೆ ದನಕರುಗಳು, ಪಕ್ಷಿಗಳು ಬದುಕುತ್ತವೆ ಎಂದಿದ್ದಾರೆ.

ಡಿಸಿಎಂ ಕಾರಜೋಳ

ಇದರ ಜೊತೆಗೆ ಸಿದ್ದರಾಮಯ್ಯ ಸಿಎಂ ಆದಾಗ ಒಣ ಬರ ಬೀಳುತ್ತದೆ. ಒಣ ಬರ ಬಿದ್ದರೆ ಹಾದಿಬೀದಿಯಲ್ಲಿ ದನಕರುಗಳು ಸತ್ತು ಹೋಗುತ್ತವೆ. ಜನ ಗುಳೆ ಹೋಗ್ತಾರೆ ಎಂದು ಕಾಂಗ್ರೆಸ್ ಸರ್ಕಾರ ಬಂದರೆ ಬರಗಾಲ ಬರುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸರ್ಕಾರಕ್ಕೆ ಅತೃಪ್ತರ ಕಾಟ

ಅತೃಪ್ತರು ಕಾಟ ಇಂದು ನಿನ್ನೆಯಿಂದ ಇಲ್ಲ, ಅದು ಎಲ್ಲಾ ಕಾಲದಿಂದಲೂ ಇದೆ.‌ ನೆಹರು ಅವರ ವಿರುದ್ಧವೂ ಅತೃಪ್ತರಿದ್ದರು, ಅತೃಪ್ತರು ಯಾವಾಗಲೂ ಇರುತ್ತಾರೆ. ಪಕ್ಷದ ನಿರ್ಣಯದ ‌ಮೇಲೆ ಎಲ್ಲವೂ ನಡೆಯುತ್ತವೆ ಎಂದು ಸಮರ್ಥಿಸಿಕೊಂಡರು.

ರೇಣುಕಾಚಾರ್ಯ ದೆಹಲಿ ಭೇಟಿ ಬಗ್ಗೆ ವ್ಯಂಗ್ಯದ ರೀತಿಯಲ್ಲಿ ಮಾತನಾಡಿದ ಕಾರಜೋಳ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದಕ್ಕಾಗಿ ಹಾಗೂ ಕ್ಷೇತ್ರಕ್ಕೆ ಹೆಚ್ಚು ರೈಲು ಮಾರ್ಗ ತರೋದಕ್ಕಾಗಿ ಹೋಗಿರುತ್ತಾರೆ. ಕ್ಷೇತ್ರಕ್ಕೆ ಹೆಚ್ಚು ರೈಲು ಬಿಡಬೇಕು ಅಂತ ರೈಲು ಬಿಡುವ ಕೆಲಸಕ್ಕಾಗಿ ಹೋಗ್ತಿರ್ತಾರೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.

ಲಸಿಕೆ ಹಾಕಿಸಿಕೊಳ್ಳಲು ಯಾರೂ ಹಿಂಜರಿಯುತ್ತಿಲ್ಲ..!

ಮತ್ತೊಂದೆಡೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿಲ್ಲ. ಎಲ್ಲರೂ ಹಾಕಿಸಿಕೊಳ್ಳುತ್ತಿದ್ದಾರೆ. ಇದು ನಿರಂತರವಾಗಿ ನಡೆಯುತ್ತಿದೆ. ಒಮ್ಮೆಲೆ ಎಲ್ಲರೂ ಹಾಕಿಸಿಕೊಳ್ಳಲು ಆಗುವುದಿಲ್ಲ, ಲಸಿಕೆ ಸುರಕ್ಷಿತವಾಗಿದೆ ಎಲ್ಲರೂ ಹಾಕಿಸಿಕೊಳ್ಳಬಹುದು ಎಂದರು. ಬಿಎಸ್​​ವೈ ಹಾಗೂ ಸರ್ಕಾರಕ್ಕೆ ಯತ್ನಾಳ್ ಮುಜುಗರದ ಹೇಳಿಕೆ ವಿಚಾರ, ನಮ್ಮ ದೇಶದ ಪ್ರಧಾನಿ, ದೇಶದ ಗೃಹಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯದ ಉಸ್ತುವಾರಿ ಎಲ್ಲರೂ ಯಡಿಯೂರಪ್ಪ ಸರ್ಕಾರಕ್ಕೆ ಉತ್ತಮ ಕಾರ್ಯ‌ ಮಾಡಿದೆ ಅಂತ ಹೇಳಿದ್ದಾರೆ‌‌ ಎಂದು ಸ್ಪಷ್ಟನೆ ನೀಡಿದರು.

ಮೀಸಲಾತಿ ಸಂವಿಧಾನದ ಪ್ರಕಾರವೇ ಮಾಡಬೇಕು..!

ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆಗಳ ವಿಚಾರವಾಗಿ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಕಾರಜೋಳ, ಆಯಾ ಜನಾಂಗದವರು ಮೀಸಲಾತಿ ಸಿಗಬೇಕು ಅಂತ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ನಮ್ಮ ದೇಶದಲ್ಲಿ ಸಂವಿಧಾನವಿದ್ದು, ಸಂವಿಧಾನ ಪ್ರಕಾರವೇ ಮಾಡಬೇಕು. ಯಾರನ್ನು ಬೇಕಾದರೆ ಎಸ್​​ಸಿಗೆ ಸೇರಿಸೋದು, ಎಸ್​​ಟಿಗೆ ಸೇರಿಸೋದು. ಹಿಂದುಳಿದವರು ಅಂತ ಮಾಡೋದಕ್ಕೆ ಅವಕಾಶವಿಲ್ಲ ಎಂದು ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.