ETV Bharat / state

ಬಾಗಲಕೋಟೆ: ಹಾನಿಯ ಸಮಗ್ರ ವಿವರ ನೀಡಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ... - ಹಾನಿಯ ಸಮಗ್ರ ವಿವರ ನೀಡಲು ಡಿಸಿಎಂ ಸೂಚನೆ

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ಹಾಗೂ ಲೋಕೋಪಯೋಗಿ, ಹೆಸ್ಕಾಂ ಸೇರಿದಂತೆ ಇತರೆ ಇಲಾಖೆಯ ಸಮಗ್ರ ಹಾನಿ ವಿವರ ನೀಡುವಂತೆ ಉಪ ಮುಖ್ಯಮಂತ್ರಿ ಗೋವಿಂದ‌ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

author img

By

Published : Aug 17, 2020, 10:59 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ಹಾಗೂ ಲೋಕೋಪಯೋಗಿ, ಹೆಸ್ಕಾಂ ಸೇರಿದಂತೆ ಇತರೆ ಇಲಾಖೆಯ ಸಮಗ್ರ ಹಾನಿ ವಿವರ ನೀಡುವಂತೆ ಉಪ ಮುಖ್ಯಮಂತ್ರಿ ಗೋವಿಂದ‌ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಜಲ್ಲಾ ಪಂಚಾಯತ್​ ಸಭಾ ಭವನದಲ್ಲಿಂದು ಪ್ರವಾಹ ಪರಿಸ್ಥಿತಿ ಹಾಗೂ ಮಳೆಯಿಂದಾದ ಹಾನಿಯ ಸಮಗ್ರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ನೀಡಿದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಹಾನಿ ವಿವರ ನೀಡುವಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಮಾಹಿತಿಯನ್ನು ಮಂಗಳವಾರ ಸಲ್ಲಿಸಲು ಸೂಚಿಸಿದರು.

ಮಳೆಯಿಂದಾದ ಹಾನಿಯ ಸಮಗ್ರ ವಿವರ ನೀಡಲು ಡಿಸಿಎಂ ಕಾರಜೋಳ ಸೂಚನೆ ನೀಡಿದ್ದಾರೆ

ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ‌ ಮಳೆ ಹೆಚ್ಚಾಗಿದ್ದು, ಹಾನಿಗೊಳಗಾದ ಬೆಳೆಯ ಮಾಹಿತಿಯ ವರದಿ ನೀಡಬೇಕು. ಅದೇ ರೀತಿ ತೋಟಗಾರಿಕೆ, ರೇಷ್ಮೆ ಬೆಳೆಯ ಮಾಹಿತಿ ನೀಡಲು ತಿಳಿಸಿದರು. ಲೋಕೋಪಯೋಗಿ ಇಲಾಖೆಯವರು ಎಂಡಿಆರ್ ಮತ್ತು ಹೆಚ್ಚುವರಿ ಹಾನಿ ವಿವರ ಸಲ್ಲಿಸಲು ಸೂಚಿಸಿದರು. ಹೆಸ್ಕಾಂನಿಂದ ಹಾನಿಗೊಳಗಾದ ಕಂಡಕ್ಟರ್​, ಟಿಸಿ ಸೇರಿದಂತೆ ಇತರೆ ಹಾನಿಯ ವಿವರ ಸಲ್ಲಿಸಲು ತಿಳಿಸಿದರು.

ವಿವಿಧ ಜಲಾಶಯಗಳಿಂದ ಸಂಗ್ರಹವಾದ ನೀರಿನ ‌ಪ್ರಮಾಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ನೀರಾವರಿ ಇಲಾಖೆಯಿಂದ ಶೇ.30, 50, 75, 100 ರಷ್ಟು ತುಂಬಿದ‌ ಕೆರೆಗಳ ಮಾಹಿತಿ ನೀಡಲು ಸೂಚಿಸಿದರು. ಜಿ.ಆರ್.ಬಿಸಿ, ಎಂ.ಎಲ್.ಬಿ.ಸಿ ಯಲ್ಲಿ ಎಷ್ಟು ಕೆರೆಗಳು ಬರುತ್ತವೆ ಅವೆಲ್ಲವುಗಳ ಮಾಹಿತಿ ನೀಡಲು ತಿಳಿಸಿದರು.

ಆಲಮಟ್ಟಿ ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ 1.37 ಲಕ್ಷ ಕ್ಯುಸೆಕ್​ ನೀರಿನ ಪ್ರಮಾಣವಿದ್ದದ್ದು, ಸಂಜೆ 5ರ ಹೊತ್ತಿಗೆ 1.53 ಲಕ್ಷ ಕ್ಯೂಸೆಕ್​ಗೆ ಹೆಚ್ಚಳವಾಗಿದೆ. ಮಂಗಳವಾರಕ್ಕೆ 2.50 ಲಕ್ಷ ಕ್ಯೂಸೆಕ್​ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಕೆ.ಬಿ.ಜಿ.ಎನ್.ಎಲ್ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಪ್ರಮಾಣ ಆಯಾ ಅಚ್ಚುಕಟ್ಟು ಪ್ರದೇಶದಲ್ಲಿನ ಮಳೆಯ ಪ್ರಮಾಣ ಕಡಿಮೆಯಾದರೆ ಮಾತ್ರ ನೀರಿನ‌‌‌ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆ ಸದ್ಯ ಪ್ರವಾಹ ಭೀತಿಯಿಂದ ಸೇಪ್ ಆಗಿದ್ದರೂ ಸಹ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರವಾಹದಿಂದ ಮುಧೋಳ ತಾಲೂಕಿನ ನಂದಗಾವ್ ಗ್ರಾಮಕ್ಕೆ ನೀರು ಬಂದಿದ್ದು, ಗ್ರಾಮದಲ್ಲಿರುವ 45 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ‌‌ ಸಿಇಓ ಟಿ.ಭೂಬಾಲನ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.