ETV Bharat / state

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನಕ್ಕೆ ಡಿಸಿ ಚಾಲನೆ

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು, ಬಾಲಕಿಯೊಬ್ಬಳನ್ನು ಮರಳಿ ಶಾಲೆಗೆ ಸೇರಿಸಿದರು.

author img

By

Published : Jul 27, 2019, 1:28 AM IST

ಶಾಲೆ ಬಿಟ್ಟ ಮಕ್ಕಳ ಮರಳಿ ಶಾಲೆಗೆ ತರುವ ಕಾರ್ಯಕ್ಕೆ ಡಿಸಿ ಚಾಲನೆ

ಬಾಗಲಕೋಟೆ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಕುದುರೆ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.

ನವನಗರದ ಆಶ್ರಯ ಕಾಲೋನಿಯಲ್ಲಿ ಚಾಲನೆ ನೀಡಿದ ಅವರು, ಶಾಲೆಯಿಂದ ದೂರವುಳಿದ ಬಾಲಕಿಯೊಬ್ಬಳ ಮನೆಗೆ ಭೇಟಿ ನೀಡಿ, ಆಕೆಯ ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 684 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಆ ಮಕ್ಕಳೆಲ್ಲ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಗುರಿ 14 ವರ್ಷದವರೆಗಿನ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬುದಾಗಿದ್ದು, ಇದಕ್ಕಾಗಿ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನನ್ವಯ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ವಿವಿಧ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಟ ಒಂದು ಮಗುವನ್ನಾದರೂ ಮರಳಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಹಿನ್ನೆಲೆ ನಾನು ಸಹ ತಿಂಗಳಿಗೆ ಒಂದು ಮಗುವನ್ನು ಶಾಲೆಗೆ ಸೇರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದರು. ಜಮಖಂಡಿ ನಗರದಲ್ಲಿ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ತಂಡ 3 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ನೇತೃತ್ವದ ತಂಡ ಸಹ 8 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ ಎಂದು ಮಾಹಿತಿ ನೀಡಿದರು.

Intro:AnchorBody:ಶಾಲೆ ಬಿಟ್ಟ ಮಕ್ಕಳ ಮರಳಿ ಶಾಲೆಗೆ ತರುವ ಕಾರ್ಯಕ್ಕೆ ಡಿಸಿ ಚಾಲನೆ
ಬಾಗಲಕೋಟೆ: -ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು
ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ನವನಗರದ ಸೆಕ್ಟರ ನಂ.46ರ ಆಶ್ರಯ ಕಾಲೋನಿಯಲ್ಲಿ ಶುಕ್ರವಾರ
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕುದುರೆ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.
ಚಾಲನೆ ನೀಡಿದ ಹಿನ್ನಲೆಯಲ್ಲಿಯೇ ಕಾರ್ಯಾಚರಣೆ ಕೈಗೊಂಡ ತಮ್ಮ ನೇತೃತ್ವದ ತಂಡ
ರಸುಲ್ಲಾ ಚೌದರಿ ಎಂಬ ಬಾಲಕಿಯ ಮನೆಗೆ ಭೇಟಿ ನೀಡಿ ಅವಳ ತಂದೆ-ತಾಯಿಯ ವನವೊಲಿಸಿ
ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 684 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಆ ಮಕ್ಕಳೆಲ್ಲ ಶಿಕ್ಷಣ
ದಿಂದ ವಂಚಿತರಾಗಬಾದು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಸರಕಾರದ ಗುರಿ 14 ವರ್ಷದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು
ಎಂಬುದಾಗಿದ್ದು, ಇದಕ್ಕಾಗಿ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಅನ್ವಯ ಪಾಲಕರು ತಮ್ಮ
ಮಗುವಿಗೆ 14 ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು. ಮಕ್ಕಳು ಯಾವುದೇ
ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿಯೊಂದು ಮಗುವನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ವಿವಿಧ ಇಲಾಖೆಯ ಅ
ಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ ಒಂದು ಮಗುವನ್ನಾದರೂ ಸಹ ಮರಳಿ ಶಾಲೆಗೆ ಸೇರಿಸುವಂತೆ
ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ತಾವು ಸಹ ತಿಂಗಳಿಗೆ ಒಂದು ಮಗುವನ್ನು
ಸೇರಿಸುವ ಕಾರ್ಯ ಮಾಡುತ್ತಿದ್ದು, ಶುಕ್ರವಾರ ಎರಡು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ
ಎಂದರು. ಅಲ್ಲದೇ ಗುರುವಾರ ಜಮಖಂಡಿ ನಗರದಲ್ಲಿ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ
ನೇತೃತ್ವದ ತಂಡ 3 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ನೇತೃತ್ವದ ತಂಡವು
ಸಹ ಮರಳಿ ಶಾಲೆಗೆ ಸೇರಿಸುವ ಕಾರ್ಯವನ್ನು ಚುರುಕಾಗಿ ಮಾಡುತ್ತಿದ್ದು, ಈ ವರೆಗೆ 8 ಮಕ್ಕಳನ್ನು
ಮರಳಿ ಶಾಲೆಗೆ ಸೇರಿಸಿದ್ದಾರೆ. ಅಲ್ಲದೇ ಸೀಮಿಕೇರಿ ಹತ್ತಿರವಿರುವ ವೀರಾಪೂರದಲ್ಲಿ ಜಿಲ್ಲಾಡಳಿತ ಕಣ್ಣು
ತಪ್ಪಿಸಿ ಬಾಲ್ಯವಿವಾಹವಾಗಿದ್ದು, ಮದುವೆಯಾದ ಬಾಲಕಿಯ ಮನೆಗೆ ಸಿಇಓ ಭೇಟಿ ನೀಡಿ ಮನೆಯ
ಪಾಲಕರನ್ನು ಮನವೊಲಿಸಿ ಪುನಃ 8ನೇ ತರಗತಿಗೆ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
ಎಂದರು.
ದುರಗವ್ವ ಯಲ್ಲಪ್ಪ ಭೋವಿ ಎಂಬ ಬಾಲಕಿ ವೀರಾಪೂರ ಆರ್.ಸಿ ಕೇಂದ್ರದ ಸರಕಾರಿ
ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿತು ಶಿಕ್ಷಣ ಮುಂದುವರಿಸದೇ ಅವರ ಮನೆಯವರು
ಮದುವೆ ಮಾಡಿದ್ದಾರೆ. ಈಗ ಆ ಬಾಲಕಿ ಗರ್ಭಾವಸ್ಥೆಯಲ್ಲಿದ್ದ ಬಗ್ಗೆ ಭೇಟಿ ಸಮಯದಲ್ಲಿ ತಿಳಿದು ಬಂ
ದಿತು. ಇದನ್ನು ಅರಿತ ಸಿಇಓ ಅವರು ಗರ್ಭಾವಸ್ಥೆಯಲ್ಲಿರುವ ಬಾಲಕಿ ಶಿಕ್ಷಣದಿಂದ
ವಂಚಿತರಾಗಬಾರದೆಂಬ ಉದ್ದೇಶದಿಂದ ಹತ್ತಿರದ ಸೀಮಿಕೇರಿ ಸರಕಾರಿ ಪ್ರೌಢಶಾಲೆಗೆ 8ನೇ ತರಗತಿಗೆ
ದಾಖಲು ಮಾಡಿಸಿದ್ದಾರೆ ಎಂದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.