ETV Bharat / state

ಪೋಷಕರ ಬುದ್ಧಿಮಾತಿಗೆ ನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಪೋಷಕರು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡಿರುವ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಊರಿನಲ್ಲಿ ತಿರುಗಾಡಬೇಡ, ಕಾಲಹರಣ ಮಾಡಬೇಡ ಎಂದಿದ್ದಕ್ಕೆ ಆಕೆ ಮನನೊಂದಿದ್ದಳು ಎಂದು ತಿಳಿದುಬಂದಿದೆ.

daughter-commits-suicide-after-words-exchange-with-her-parents
ಪೋಷಕರ ಮಾತಿನಿಂದ ಸಿಟ್ಟಾಗಿ ಮಗಳು ಆತ್ಮಹತ್ಯೆ
author img

By

Published : Oct 6, 2021, 7:14 AM IST

Updated : Oct 6, 2021, 12:41 PM IST

ಬಾಗಲಕೋಟೆ: ಮನೆಯಲ್ಲಿ ತಂದೆ,ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ. ಸೌಂದರ್ಯ ಸಂಜು ಗೊಲಭಾಂವಿ (18) ಎಂಬ ಯುವತಿ ಮೃತಪಟ್ಟಿದ್ದಾಳೆ.

ಈಕೆ ನಗರದ ಅಶೋಕ ಕಾಲೋನಿಯ ನಿವಾಸಿ. ದ್ವಿತೀಯ ಪಿಯು ಓದುತ್ತಿದ್ದಳು. ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡಿ ಬಳೆಚೂರು (ಮಿಂಚಿನಪುಡಿ) ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಕಾಲಹರಣ ಮಾಡಬೇಡ, ಊರಲ್ಲಿ ತಿರುಗಾಡಬೇಡ ಎಂದು ಪೋಷಕರು ಕಿವಿಮಾತು ಹೇಳಿದ್ದರಂತೆ. ಇದರಿಂದ ನೊಂದಿದ್ದ ಆಕೆ ಕೋಪಗೊಂಡು ಸಾವಿನ ನಿರ್ಧಾರ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳ ಪ್ರತಿಭಟನೆ

ಇನ್ನೊಂದೆಡೆ, ಆತ್ಮಹತ್ಯೆ ಮಾಡಿಕೊಂಡಿದ್ದ ಸೌಂದರ್ಯಳಿಗೆ ಸಕಾಲಕ್ಕೆ ಸಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಮುಂಭಾಗ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹಾಗೂ ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ ನಡೆಯಿತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಜಮಖಂಡಿ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾಳೆ. ಹೀಗಾಗಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯವಿಲ್ಲ, ವೈದ್ಯರು ಹಾಗೂ ಯಂತ್ರಗಳೇ ಇಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮನೆ ಬಿಟ್ಟು ಹೋದ ಮಗಳು : ಮನನೊಂದು ತಾಯಿ ಆತ್ಮಹತ್ಯೆ

Last Updated : Oct 6, 2021, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.