ETV Bharat / state

ಬಾಗಲಕೋಟೆಯಲ್ಲಿ 17 ಜನರಲ್ಲಿ ಕೋವಿಡ್ ದೃಢ : ಆತಂಕದಲ್ಲಿ ಜನತೆ - Covid-19 latest news

ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ 17 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಇಲ್ಲಿಯವರೆಗೆ ಒಟ್ಟು 12,098 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 10,968 ನೆಗಟಿವ್ ಪ್ರಕರಣ, 180 ಪಾಸಿಟಿವ್ ಪ್ರಕರಣ ಹಾಗೂ 4 ಜನ ಮೃತ ಪ್ರಕರಣ ವರದಿಯಾಗಿದೆ. ಕೋವಿಡ್-19 ನಿಂದ ಒಟ್ಟು 117 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 61 ಸಕ್ರಿಯ ಪ್ರಕರಣಗಳು ಇವೆ.

ಬಾಗಲಕೋಟೆಯಲ್ಲಿ 17 ಜನರಲ್ಲಿ ಕೋವಿಡ್ ದೃಢ
ಬಾಗಲಕೋಟೆಯಲ್ಲಿ 17 ಜನರಲ್ಲಿ ಕೋವಿಡ್ ದೃಢ
author img

By

Published : Jun 28, 2020, 11:26 PM IST

ಬಾಗಲಕೋಟೆ : ಜಿಲ್ಲೆಯಲ್ಲಿ ಮತ್ತೆ 17 ಜನರಿಗೆ ಕೋವಿಡ್ ಸೋಂಕು ಇರುವುದು ರವಿವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 117 ಜನ ಕೋವಿಡ್‍ನಿಂದ ಗುಣಮುಖರಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೆಮ್ಮು, ನೆಗಡಿ, ಜ್ವರದ ಹಿನ್ನೆಲೆ ಬಾಗಲಕೋಟೆ ವಿನಾಯಕ ನಗರದ 42 ವರ್ಷದ ಪುರುಷ ಪಿ-12062 (ಬಿಜಿಕೆ-164), ಮುಧೋಳನ ಪಿ-9151 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮುಧೋಳ ನಗರದ 39 ವರ್ಷದ ಮಹಿಳೆ ಪಿ-12063 (ಬಿಜಿಕೆ-165), 46 ವರ್ಷದ ಪುರುಷ ಪಿ-12064 (ಬಿಜಿಕೆ-166), ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದ ಮುಧೋಳ ನಗರದ 70 ವರ್ಷದ ಮಹಿಳೆ ಪಿ-12065 (ಬಿಜಿಕೆ-167), 26 ವರ್ಷದ ಯುವಕನಿಗೆ ಪಿ-12066 (ಬಿಜಿಕೆ-168) ಕೋವಿಡ್ ಸೋಂಕು ಇರುವುದು ದೃಡಪಟ್ಟಿದೆ.

ಕಲಾದಗಿ ಗ್ರಾಮದ ಪಿ-8300 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ 13 ವರ್ಷದ ಬಾಲಕಿ ಪಿ-12067 (ಬಿಜಿಕೆ-169), ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿ ಗ್ರಾಮದ 11 ವರ್ಷದ ಬಾಲಕಿ ಪಿ-12068 (ಬಿಜಿಕೆ-170), 35 ವರ್ಷದ ಮಹಿಳೆ ಪಿ-12069 (171), 15 ವರ್ಷದ ಬಾಲಕಿ ಪಿ-12070 (ಬಿಜಿಕೆ-172), 23 ವರ್ಷದ ಯುವತಿ ಪಿ-12071 (ಬಿಜಿಕೆ-173), 37 ವರ್ಷದ ಪುರುಷ ಪಿ-12072 (ಬಿಜಿಕೆ-174), 25 ವರ್ಷದ ಯುವತಿ ಪಿ-12073 (ಬಿಜಿಕೆ-175), 27 ವರ್ಷದ ಯುವತಿ ಪಿ-12074 (ಬಿಜಿಕೆ-176), 8 ತಿಂಗಳ ಗಂಡು ಮಗು ಪಿ-12075 (ಬಿಜಿಕೆ-177), 20 ವರ್ಷದ ಯುವಕ ಪಿ-12076 (ಬಿಜಿಕೆ-178) ಹಾಗೂ 22 ವರ್ಷದ ಯುವಕನ ಪಿ-12077 (ಬಿಜಿಕೆ-179) ಕೊರೊನಾ ವರದಿ ಪಾಸಿಟಿವ್​ ಬಂದಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಬಾಗಲಕೋಟೆ ನಗರದ ಮಾಲಜಿ ಆಸ್ಪತ್ರೆಗೆ ದಾಖಲಾದ ನವನಗರದ ಸೆಕ್ಟರ್ ನಂ.57ರ 50 ವರ್ಷದ ವ್ಯಕ್ತಿಗೆ ಪಿ-12078 (ಬಿಜಿಕೆ-180) ಸೋಂಕು ದೃಡಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 877 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 688 ಜನರ ಮೇಲೆ ನಿಗಾವಹಿಸಲಾಗಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 12,098 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 10,968 ನೆಗಟಿವ್ ಪ್ರಕರಣ, 180 ಪಾಸಿಟಿವ್ ಪ್ರಕರಣ ಹಾಗೂ 4 ಜನ ಮೃತ ಪ್ರಕರಣ ವರದಿಯಾಗಿದೆ. ಕೋವಿಡ್-19 ನಿಂದ ಒಟ್ಟು 117 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 61 ಸಕ್ರಿಯ ಪ್ರಕರಣಗಳು ಇವೆ.

ಇಲ್ಲಿಯವರೆಗೆ ಒಟ್ಟು 21 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿವೆ. ಕಂಟೇನ್ಮೆಂಟ್ ಝೋನ್ 10 ಇದ್ದು, ಇನ್‍ಸ್ಟಿಟ್ಯೂಷನಲ್​ ಕ್ವಾರಂಟೈನ್‍ನಲ್ಲಿದ್ದ 3502 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.