ಬಾಗಲಕೋಟೆ: ತಾಲೂಕಿನ ರಬಕವಿ - ಬನಹಟ್ಟಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ತೆರಳಿದ್ದ ಈ ಕುಟುಂಬ ರಾಜ್ಯಕ್ಕೆ ಹಿಂತಿರುಗುವ ವೇಳೆ ಸೊಲ್ಲಾಪೂರದ ಗಡಿಯಲ್ಲಿ ಇವರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಿಲಾಗಿದೆ. ಇವರಿಬ್ಬರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಗೈಬುಸಾಬ್ ಗಲಗಲಿ ಹೇಳಿದ್ದಾರೆ.
ಓದಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 28,903 ಕೋವಿಡ್ ಪ್ರಕರಣ ಪತ್ತೆ
ತಾಲೂಕಿನಾದ್ಯಂತ ರಬಕವಿ - ಬನಹಟ್ಟಿ, ತೇರದಾಳ ಹಾಗೂ ಮಹಾಲಿಂಗಪೂರದ ಸಮುದಾಯ ಆಸ್ಪತ್ರೆಗಳಲ್ಲಿ ದಿನಕ್ಕೆ 300ಕ್ಕೂ ಅಧಿಕ ಜನರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಆದರೂ ಜನತೆ ನಿರ್ಲಕ್ಷ್ಯ ಹಾಗೂ ಬೇಸರದಿಂದ ಲಸಿಕೆ ಪಡೆಯುವಲ್ಲಿ ಹಿಂದೇಟು ಹಾಕುತ್ತಿರುವುದು ಕೊರೊನಾ ಹೆಚ್ಚಾಗುವ ಆತಂಕ ಮೂಡಿಸಿದೆ.