ETV Bharat / state

ಕೊರೊನಾ ಎಫೆಕ್ಟ್​ : ಬೀದಿಗೆ ಬಿದ್ದ ಮಹಿಳಾ ಕಲಾವಿದರ ಬದುಕು

author img

By

Published : Apr 14, 2020, 2:13 PM IST

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹಂಸನೂರು, ಇಲಕಲ್ಲ, ಮುಧೋಳ, ಶಿರೋಳ ಜಮಖಂಡಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಾಟಕದಲ್ಲಿ ಪಾತ್ರ ಮಾಡುವ ಮಹಿಳಾ ಕಲಾವಿದರು ಇದ್ದಾರೆ. ಇವರಿಗೆ ನಾಟಕವೇ ಪ್ರಮುಖ ಉದ್ಯೋಗ. ಇದೇ ತಿಂಗಳದಲ್ಲಿ ಲಕ್ಷಾಂತರ ರೂಪಾಯಿಗಳ ದುಡಿಮೆ ಮಾಡಿಕೊಂಡು ನಂತರ ಮಳೆಗಾಲದಲ್ಲಿ ದುಡಿಮೆ ಇಲ್ಲದೇ ಖಾಲಿ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದ ಇವರು, ಇದೀಗ ದುಡಿಮೆ ಸಮಯದಲ್ಲಿ ಉದ್ಯೋಗ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Corona effect
ಕೊರೊನಾ ಎಫೆಕ್ಟ್​

ಬಾಗಲಕೋಟೆ : ಲಾಕ್​ಡೌನ್​ನಿಂದಾಗಿ ನಾಟಕ ಮಾಡಿ ಜೀವನ ಸಾಗಿಸುತ್ತಿದ್ದ ನಗರದ ಸಾವಿರಾರು ಮಹಿಳಾ ಕಲಾವಿದರ ಬದುಕು ಬೀದಿಗೆ ಬಿದ್ದಿದೆ.

ಮಾರ್ಚ್​ ಹಾಗೂ ಮೇ ತಿಂಗಳಲ್ಲಿ ಅತೀ ಹೆಚ್ಚು ಜಾತ್ರೆ ಉತ್ಸವ, ಹಬ್ಬ ಹರಿದಿನಗಳು ಇರುತ್ತಿದ್ದವು, ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ಮಹಿಳಾ ಕಲಾವಿದರನ್ನು ಕರೆಸಿ ವೇತನ ನೀಡಿ ಮನೋರಂಜನೆ ಪಡೆಯುತ್ತಿದ್ದರು. ಆದರೀಗ ಲಾಕ್​ಡೌನ್​ ಹಿನ್ನೆಲೆ ಎಲ್ಲ ಕಾರ್ಯಕ್ರಮಗಳು ಬಂದ್​ ಆಗಿರುವುದರಿಂದ ಕಲಾವಿದರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹಂಸನೂರು, ಇಲಕಲ್ಲ, ಮುಧೋಳ, ಶಿರೋಳ ಜಮಖಂಡಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಾಟಕದಲ್ಲಿ ಪಾತ್ರ ಮಾಡುವ ಮಹಿಳಾ ಕಲಾವಿದರು ಇದ್ದಾರೆ. ಇವರಿಗೆ ನಾಟಕವೇ ಪ್ರಮುಖ ಉದ್ಯೋಗ. ಇದೇ ತಿಂಗಳದಲ್ಲಿ ಲಕ್ಷಾಂತರ ರೂಪಾಯಿಗಳ ದುಡಿಮೆ ಮಾಡಿಕೊಂಡು ನಂತರ ಮಳೆಗಾಲದಲ್ಲಿ ದುಡಿಮೆ ಇಲ್ಲದೇ ಖಾಲಿ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದ ಇವರು, ಇದೀಗ ದುಡಿಮೆ ಸಮಯದಲ್ಲಿ ಉದ್ಯೋಗ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಎಫೆಕ್ಟ್​

ನಾಟಕವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಯುವತಿಯರ ನೂರಾರು ಕುಟುಂಬಗಳು ಹಂಸನೂರು ಗ್ರಾಮದಲ್ಲಿವೆ. ನಾಟಕ ವೃತ್ತಿಯನ್ನೇ ನಂಬಿ ಬದುಕು ನಡೆಸುತ್ತಿದ್ದವರ ಜೀವನ ಈಗ ದುಸ್ಥರವಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.