ETV Bharat / state

ಬಾಗಲಕೋಟೆಯಲ್ಲಿ ಇನ್ಮುಂದೆ ಮದುವೆಗಳಿಗೆ ಅನುಮತಿ ಇಲ್ಲ: ಡಿಸಿಎಂ ಕಾರಜೋಳ

ಕೋವಿಡ್ ಸ್ಯಾಂಪಲ್‍ಗಳ ಪರೀಕ್ಷೆಯ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಹೆಚ್ಚುವರಿಯಾಗಿ ಮತ್ತೊಂದು ಆರ್​ಟಿ-ಪಿಸಿಆರ್ ಹಾಗೂ ಎಎಂಆರ್ ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಈ ಹಿಂದೆ ಅನುಮತಿಸಲಾದ ಮದುವೆ ಹೊರತುಪಡಿಸಿ ಇನ್ಮುಂದೆ ವಿವಾಹಗಳಿಗೆ ಅನುಮತಿ‌ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Corona control meeting in Bagalkot
ಡಿಸಿಎಂ ಕಾರಜೋಳ ಹೇಳಿಕೆ
author img

By

Published : May 8, 2021, 9:21 AM IST

ಬಾಗಲಕೋಟೆ: ಕೊರೊನಾ ಎರಡನೇ ಅಲೆಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇನ್ಮುಂದೆ ವಿವಾಹ ಸಮಾರಂಭಗಳಿಗೆ ಅನುಮತಿ ಇಲ್ಲ. ಮದುವೆಯಿಂದಲೇ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಡಿಸಿಎಂ ಕಾರಜೋಳ ಹೇಳಿಕೆ

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ 956 ಮದುವೆಗೆ ಅನುಮತಿ ಪಡೆಯಲಾಗಿದೆ. ಇವನ್ನು ಹೊರತುಪಡಿಸಿ ಇನ್ಮುಂದೆ ಯಾವುದೇ ವಿವಾಹಗಳಿಗೆ ಅನುಮತಿ‌ ಇರುವುದಿಲ್ಲ ಎಂದರು.

ಜಿಲ್ಲೆಗೆ ಈಗಾಗಲೇ 15 KL ಆಕ್ಸಿಜನ್ ಬಂದಿದ್ದು, ಹೆಚ್ಚುವರಿಯಾಗಿ ಇನ್ನೂ 15 KL ಆಕ್ಸಿಜನ್ ಬರಲಿದೆ. ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳ ಆಡಳಿತ ಮಂಡಳಿಯವರು ಆಕ್ಸಿಜನ್ ಸಿಲಿಂಡರ್​ಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಎಂ.ಎಸ್.ಪಿ.ಎಲ್ ಅವರಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಸೇರಿ ಒಟ್ಟು 80 ಜಂಬೂ ಸಿಲಿಂಡರ್​ಗಳನ್ನು ಪ್ರತಿದಿನ ನೀಡಲು ಒಪ್ಪಿರುವುದಾಗಿ ಕಾರಜೋಳ ತಿಳಿಸಿದ್ದಾರೆ.

ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಗುಳೇದಗುಡ್ಡ ತಾಲೂಕುಗಳಲ್ಲಿ 3570 ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆಲ್ಲ ಔಷಧ ಕಿಟ್ ನೀಡಲಾಗಿದೆ. 2700 ಕಾರ್ಮಿಕರಿಗೆ ಜಾಬ್ ಕಾರ್ಡ್​ ನೀಡಲಾಗಿದೆ. ಅಲ್ಲದೇ ಉದ್ಯೋಗ ಖಾತ್ರಿಯಡಿ ಉದ್ಯೋಗ ಸಹ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಸಣ್ಣ ಕುಟುಂಬದಲ್ಲಿ ಒಂದೇ ಶೌಚಾಲಯ, ಸ್ನಾನ ಗೃಹ ಹೊಂದಿದವರ ಮನೆಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಕಾರಜೋಳ ಸೂಚಿಸಿದ್ದಾರೆ.

ಕೋವಿಡ್ ಸ್ಯಾಂಪಲ್‍ಗಳ ಪರೀಕ್ಷೆಯ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಹೆಚ್ಚುವರಿಯಾಗಿ ಮತ್ತೊಂದು ಆರ್​ಟಿ-ಪಿಸಿಆರ್ ಹಾಗೂ ಎಎಂಆರ್ ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಇದರಿಂದ ಈಗಿರುವ ಸ್ಯಾಂಪಲ್‍ಗಳ ಪರೀಕ್ಷೆಗಿಂತ ದಿನಕ್ಕೆ ಇನ್ನು ಹೆಚ್ಚಿನ ಪರೀಕ್ಷೆ ನಡೆಸಲು ಅನುಕೂಲವಾಗಲಿದೆ ಎಂದು ಕಾರಜೋಳ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.