ETV Bharat / state

ಫೋಟೋಗ್ರಾಫರ್ಸ್​ಗೂ ಸಂಕಷ್ಟ ತಂದ ಕೊರೊನಾ​... ಚಿತ್ರ ತೆಗೆಯುವವರ ಬದುಕು ಕಗ್ಗತ್ತಲು! - bagalakote latest corona news

ಈ ವೇಳೆಯಲ್ಲಿ ಫೋಟೋಗ್ರಾಫರ್​ಗಳು ಅಷ್ಟೋ ಇಷ್ಟು ಹಣ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ಭೀತಿ ಎಲ್ಲವನ್ನೂ ಸ್ತಬ್ಧಗೊಳಿಸಿದೆ. ಈ ಹಿನ್ನೆಲೆ ಜೀವನ ನಡೆಸುವುದು ಹೇಗೆ ಎಂದು ಛಾಯಾಚಿತ್ರಗ್ರಾಹಕರು​ ಚಿಂತೆಗೀಡಾಗಿದ್ದಾರೆ.

ಕೊರೊನಾದಿಂದ ಸಂಕಷ್ಟದಲ್ಲಿ ಫೋಟೋಗ್ರಾಫರ್ಸ್
ಕೊರೊನಾದಿಂದ ಸಂಕಷ್ಟದಲ್ಲಿ ಫೋಟೋಗ್ರಾಫರ್ಸ್
author img

By

Published : Apr 20, 2020, 6:18 PM IST

ಬಾಗಲಕೋಟೆ: ಕೊರೊನಾದಿಂದ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಹಾಗೆಯೇ ಫೋಟೋಗ್ರಾಫರ್​ಗಳ ಬದುಕೂ ಕೂಡ ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿ ವರ್ಷ ಹೋಳಿ-ಹುಣ್ಣಿಮೆ ಬಳಿಕ ಅಂದ್ರೆ ಮಾರ್ಚ್​, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮದುವೆ ಸೇರಿದಂತೆ ಇತರ ಶುಭ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಫೋಟೋ ಹಾಗೂ ವಿಡಿಯೋಗ್ರಾಫರ್ಸ್​ ವಾರ್ಷಿಕವಾಗಿ ಐದು ಲಕ್ಷಕ್ಕೂ ಅಧಿಕ ಹಣ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಒಟ್ಟು 300 ಫೋಟೋ ಹಾಗೂ ವಿಡಿಯೋಗ್ರಫಿ ಅಂಗಡಿಗಳಿದ್ದು, ಈಗ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೊರೊನಾದಿಂದ ಸಂಕಷ್ಟದಲ್ಲಿ ಫೋಟೋಗ್ರಾಫರ್ಸ್
ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಫೋಟೋಗ್ರಾಫರ್ಸ್

ಈ ಸಮಯದಲ್ಲೇ ಹೆಚ್ಚು ಹಬ್ಬ ಹರಿದಿನಗಳು ಇರುತ್ತಿದ್ದವು. ಈ ವೇಳೆಯಲ್ಲಿ ಫೋಟೋಗ್ರಾಫರ್​ಗಳು ಅಷ್ಟೋ ಇಷ್ಟು ಹಣ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ಸೋಂಕು ಎಲ್ಲವನ್ನು ನಿಶಬ್ಧಗೊಳಿಸಿದೆ. ಇನ್ನು ಕೆಲ ನೂತನ ತಂತ್ರಜ್ಞಾನದ ಕ್ಯಾಮರಾಗಳನ್ನ ತೆಗೆದುಕೊಂಡು ಇದರಲ್ಲಿ ಜೀವನ ಕಟ್ಟಿಕೊಳ್ಳಲು ಮುಂದಾದ ಫೋಟೋಗ್ರಾಫರ್​ಗಳ ಪಾಡು ಹೇಳತೀರದ್ದಾಗಿದೆ. ಬ್ಯಾಂಕ್​ನಿಂದ ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸಿದ ಕ್ಯಾಮರಾ ಈಗ ಮೂಲೆ ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.