ETV Bharat / state

ಪದವಿ ಪ್ರದಾನ ಸಮಾರಂಭ : ವಿದ್ಯಾರ್ಥಿಗಳು ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.. ಎಮ್ ಸಂಕರನ್

ವಿದ್ಯಾರ್ಥಿಗಳು ಜೀವನದಲ್ಲಿ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಜೀವನದಲ್ಲಿನ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಉತ್ಕೃಷ್ಟತೆಯನ್ನು ಸಾಧಿಸಬೇಕು ಎಂದು ಬೆಂಗಳೂರಿನ ಇಸ್ರೋದ ಯು ಆರ್ ರಾವ್ ಸ್ಯಾಟ್‌ಲೈಟ್ ಸೆಂಟರ್‌ನ ನಿರ್ದೇಶಕ ಎಮ್ ಸಂಕರನ್ ಹೇಳಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Sep 24, 2023, 6:19 PM IST

ಬಾಗಲಕೋಟೆ : ಭಾರತ ದೇಶವು ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ದಾಪುಗಾಲಿಡುತ್ತಿದೆ. 2047ಕ್ಕೆ ಭಾರತ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಸ್ಯಾಟ್‌ಲೈಟ್ ಸೆಂಟರ್‌ನ ನಿರ್ದೇಶಕ ಎಮ್. ಸಂಕರನ್ ಹೇಳಿದರು.

ನಗರದ ಪ್ರತಿಷ್ಠಿತ ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್​ ಕಾಲೇಜಿನ ನೂತನ ಸಭಾಭವನದಲ್ಲಿ ನಡೆದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಂಡು ವಿಶಾಲ ಮತ್ತು ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹೊಸ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವೃತ್ತಿಪರ ಜ್ಞಾನ ಮತ್ತು ವೈಯಕ್ತಿಕ ಸ್ವಭಾವಗಳಿಂದ ವಿಶ್ವಾಸ ಮತ್ತು ಗೌರವ ಗಳಿಸಿಕೊಳ್ಳಬೇಕು. ಜೀವನದಲ್ಲಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಸೃಜನ ಶೀಲತೆಯಿಂದ ಉತ್ಕೃಷ್ಟತೆಯನ್ನು ಸಾಧಿಸಬೇಕು. ಇಂದು ವಿಶ್ವವು ವಿವಿಧ ಕೊರೊನಾ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳ ಬರಿದಾಗುವಿಕೆ, ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಂದ ತತ್ತರಿಸಿದೆ. ಆದ್ದರಿಂದ ಭೂಮಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಯವರೆಗೆ ಸುರಕ್ಷಿತವಾಗಿ ತಲುಪಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಮೈಸೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ವಿನಾಯಕ ಪಿ ಹೆಗಡೆ ಮಾತನಾಡಿ, ವೃತ್ತಿ ಜೀವನಕ್ಕೆ ಶಿಕ್ಷಣ ಭದ್ರ ಬುನಾದಿಯಾಗಿದ್ದು, ವಿವಿಧ ಮೂಲಗಳಿಂದ ಪ್ರೇರಣೆಯನ್ನು ಪಡೆದುಕೊಂಡು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. 30 ವರ್ಷಗಳ ಹಿಂದೆ ನೋಡಿದ ಬಾಗಲಕೋಟೆ ನಗರಕ್ಕೂ ಇವಾಗ ನೋಡುವ ಬಾಗಲಕೋಟೆಗೂ ತುಂಬಾನೆ ಬದಲಾವಣೆಯಾಗಿದೆ. ಇದರಲ್ಲಿ ಬಿವಿವಿ ಸಂಘದ ಪಾತ್ರ ದೊಡ್ಡದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಮಾತನಾಡಿ, ಯುವ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದು ಉತ್ತಮ ಇಂಜನೀಯರ್ ಆಗಿ ಹೊರ ಬರುವುದು ಒಳ್ಳೆಯ ಬದಲಾವಣೆ. ಇದರೊಂದಿಗೆ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಹೊಸ ಸಂಶೋಧನೆ ಕಡೆಗೆ ಆಸಕ್ತಿ ಹೊಂದಿ ಇನ್ನೊಬ್ಬರಿಗೆ ಉದ್ಯೋಗ ನೀಡುವಂತೆ ಮತ್ತು ಸ್ವಾವಲಂಬಿಗಳಾಗುವಂತೆ ಬೆಳೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮೊದಲ ಬಾರಿಗೆ ಐದು ವಿದ್ಯಾರ್ಥಿಗಳಿಗೆ ಬಿಇ (ಆನರ್ಸ್) ಪದವಿಯನ್ನು ನೀಡಲಾಯಿತು. 2021-22ನೇ ಸಾಲಿನಲ್ಲಿ 729 ಬಿಇ ಪದವೀಧರರಿಗೆ, 98 ಎಂಟೆಕ್ ಪದವೀಧರರಿಗೆ, 2022-23ನೇ ಸಾಲಿನ 515 ಬಿಇ ಪದವೀಧರರಿಗೆ ಸೇರಿ ಒಟ್ಟು 1342 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಆರ್. ಎನ್. ಹೆರಕಲ್, ಪ್ರಾಚಾರ್ಯರಾದ ಡಾ. ಎಸ್. ಎಸ್. ಇಂಜಗನೇರಿ, ಡಾ. ರೇವಣ್ಣ ಬೆಣ್ಣೂರ ಹಾಗೂ ಶ್ರೀ ಪ್ರಸಾದ ಉಮರ್ಜಿ, ಪರೀಕ್ಷಾ ನಿಯಂತ್ರಾಧಿಕಾರಿಗಳಾದ ಡಾ. ಕೆ ಚಂದ್ರಶೇಖರ, ಡಾ. ಎಸ್ ಜಿ ಕಂಬಾಳಿಮಠ, ಮತ್ತು ಡಾ. ವಿಜಯಲಕ್ಷ್ಮೀ ಜಿಗಜಿನ್ನಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : 9ನೇ ತರಗತಿ, ಪ್ರಥಮ ಪಿಯುಸಿಗೆ ಈ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.