ETV Bharat / state

ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.. ಹೈಕಮಾಂಡ್ ಮೇಲೆ ವಿಶ್ವಾಸವಿದೆ: ವೀಣಾ ಕಾಶಪ್ಪನವರ - ನೇಕಾರರ ಸಮಸ್ಯೆಗಳಿಗೆ ಒತ್ತು ನೀಡಿಲ್ಲ

ಸಂಸದ ಪಿ ಸಿ ಗದ್ದಿಗೌಡರ ಅವರು, 20 ವರ್ಷಗಳಿಂದ ಸಂಸದರಾಗಿದ್ದು, ಆದರೆ ಅಭಿವೃದ್ದಿ ಕಾರ್ಯಗಳು ಮಾತ್ರ ಶೂನ್ಯವಾಗಿವೆ. ಮೆಡಿಕಲ್ ಕಾಲೇಜು, ಏಮ್ಸ್ ಕೈ ತಪ್ಪಿ ಹೋಗಿದೆ. ಪ್ರವಾಸೋದ್ಯಮಕ್ಕೆ ಯಾವುದೇ ಒತ್ತು ನೀಡಿಲ್ಲ. ಐಹೊಳೆ, ಪಟ್ಟದಕಲ್ಲು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ್ದರೂ, ಸೌಕರ್ಯಗಳು ಇಲ್ಲ. ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಗಳಿಲ್ಲ ಎಂದು ವೀಣಾ ಕಾಶಪ್ಪನವರ ಆರೋಪ.

Veena Kashappanavar spoke at the press conference.
ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು.
author img

By

Published : May 30, 2023, 7:57 PM IST

Updated : May 30, 2023, 11:03 PM IST

ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು.

ಬಾಗಲಕೋಟೆ: ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಗಿನಿಂದಲೆ ಸಿದ್ದತೆ ನಡೆಸುತ್ತಿದೆ ಅನಿಸುತ್ತಿದೆ.

ಬಾಗಲಕೋಟೆಯಲ್ಲಿ ಇಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್​ ಆಕಾಂಕ್ಷಿ ಆಗಿದ್ದು, ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದ್ದರು. ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲೆಗೆ ಕೊಡುಗೆ ಏನು ಎಂದು ಪ್ರಶ್ನೆ ಮಾಡುವುದರೊಂದಿಗೆ ನಾಲ್ಕು ಅವಧಿಗೆ ಸಂಸದರಾಗಿ ಯಾವುದೇ ಕೆಲಸ ಮಾಡಿಲ್ಲ ಸಂಸದರಾಗಿ ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದು ಅಭಿವೃದ್ದಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಸಂಸದರು 2021 ರಿಂದ ಇಲ್ಲಿಯ ವರೆಗೆ ಸದನದಲ್ಲಿ ಯಾವುದೇ ಪ್ರಶ್ನೆಗಳು ಎತ್ತಿಲ್ಲ. ಅದಕ್ಕೂ ಪೂರ್ವದಲ್ಲಿ ಕೆಲವು ಪ್ರಶ್ನೆಗಳು ಮಾಡಿದ್ದು, ಅದರಲ್ಲಿ ನಮ್ಮ ಮತಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಇಲ್ಲ. ಇಂತಹ ಸಂಸದರಿಂದ ಜನರು ಏನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಬಾಗಲಕೋಟೆ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಏಮ್ಸ್ ಸ್ಥಾಪನೆ ನಿರಾಸಕ್ತಿ ತೋರಿದ್ದರಿಂದ ಕೈ ತಪ್ಪಿ ಹೋಗಿದೆ. ಪ್ರವಾಸೋದ್ಯಮಕ್ಕೆ ಯಾವುದೇ ಒತ್ತು ನೀಡಿಲ್ಲ. ಐಹೊಳೆ, ಪಟ್ಟದಕಲ್ಲು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು ಯಾವುದೇ ಮೂಲ ಸೌಕರ್ಯಗಳು ಇಲ್ಲ. ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಗಳಿಲ್ಲ. ಪ್ರವಾಸೋದ್ಯಮ ಅಭಿವೃದ್ದಿ ಪಡಿಸಿದಲ್ಲಿ ಉದ್ಯೋಗ ಸೃಷ್ಠಿಸ ಬಹುದಾಗಿತ್ತು. ಆದರೆ, ಸಂಸದರು ಯಾವುದಕ್ಕೂ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದರು.

ರೈತರ, ನೇಕಾರರ ಸಮಸ್ಯೆಗಳಿಗೆ ಒತ್ತು ನೀಡಿಲ್ಲ. ನೇಕಾರರ ಸೂಕ್ತವಾದ ಮಾರುಕಟ್ಟೆ ಕಲ್ಪಿಸಿಕೊಟ್ಟಿಲ್ಲ. ಇದರಿಂದಾಗಿ ನೇಕಾರರ ಉದ್ಯೋಗ ಕಣ್ಮರೆಯಾಗುತ್ತಿದೆ. ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ. ಪ್ರವಾಹ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಲು ಬರಲಿಲ್ಲ. ಕೊರೊನಾ ಸಂದರ್ಭದಲ್ಲಿ ಮಾಸ್ಕ ವಿತರಣೆ ಮಾಡಿದ್ದು ಬಿಟ್ಟರೆ ಅವರ ಉಳಿದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ದೂರಿದರು.

ಬಾಗಲಕೋಟೆ ಕುಡಚಿ ರೇಲ್ವೆ ಮಾರ್ಗ ಅರ್ಧಕ್ಕೆ ನಿಂತಿದ್ದು, ಇನ್ನೂ ಖಜ್ಜಿಡೋಣಿ ವರೆಗೆ ಮಾತ್ರ ಕೆಲಸ ಮಾಡಿದ್ದಾರೆ. ಇತರ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿವೆ. ಆದರೆ, ಬಾಗಲಕೋಟೆಯಲ್ಲಿ ಇನ್ನೂವರೆಗೆ ವಿಮಾನ ನಿಲ್ದಾಣ ಸ್ಥಾಪನೆಗೆ ಮುತುವರ್ಜಿ ವಹಿಸಿಲ್ಲ. ಯುಕೆಪಿ ಸಂತ್ರಸ್ತರ ಕೂಗಿಗೆ ಸಂಸದರು ಸ್ಪಂದಿಸಿಲ್ಲ ಎಂದು ವೀಣಾ ಕಾಶಪ್ಪನವರ್ ಆರೋಪಿಸಿದರು.

ಮತ್ತೆ ಸ್ಪರ್ಧೆ ಮಾಡುವೆ: ಮುಂಬರುವ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ 5 ಲಕ್ಷ ಮತಗಳನ್ನು ಪಡೆದುಕೊಂಡಿದ್ದೆ ಈಗ ಮತ್ತೆ ಸ್ಪರ್ಧೆ ಮಾಡುವೆನು. ಎಂದು ತಿಳಿಸಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಎರಡು ವಿಧಾನ ಸಭಾ ಮತಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದರು. ಆದರೆ, ಈಗ ಐದು ವಿಧಾನಸಭಾ ಮತಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಇದ್ದು ನನಗೆ ಸಂಪೂರ್ಣ ಬೆಂಬಲ ದೊರೆಯುವ ನಿರೀಕ್ಷೆ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ನಾನು ಬಾಗಲಕೋಟೆ ಜಿಪಂ ಅಧ್ಯಕ್ಷೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಉತ್ತಮವಾಗಿ ಕೆಲಸ ಮಾಡಿದ್ದು, ಪ್ರವಾಹ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಜಿಪಂದಿಂದ ನೆರವು ನೀಡಿದ್ದೇನೆ. ಜಿಲ್ಲಾಸ್ಪತ್ರೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನು. ನನ್ನ ಅವಧಿಯಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದೇನೆ ಎಂದು ಹೇಳಿದರು.

ಹುನಗುಂದ ವಿಧಾನಸಭಾ ಮತಕ್ಷೇತ್ರದ ಜಯಗಳಿಸಿ ಶಾಸಕರಾಗಿರುವ ನನ್ನ ಪತಿ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನಕ್ಕಾಗಿ ನಾವು ಒತ್ತಾಯ ಮಾಡಿದ್ದೀವಿ. ಆದರೆ ಸಚಿವ ಸ್ಥಾನ ಸಿಗಲಿಲ್ಲ. ನಮ್ಮ ಪಕ್ಷದ ಹೈಕಮಾಂಡ್​ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಇದೆ ಎಂದು ವೀಣಾ ಕಾಶಪ್ಪನವರ ತಿಳಿಸಿದರು.

ಇದನ್ನೂಓದಿ: ಪಠ್ಯಪುಸ್ತಕದ ಯಡವಟ್ಟುಗಳನ್ನ ನಾವು ತಿದ್ದುತ್ತೇವೆ: ಡಾ ಎಚ್. ಸಿ.ಮಹದೇವಪ್ಪ

Last Updated : May 30, 2023, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.