ETV Bharat / state

ಕಾಂಗ್ರೆಸ್ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಅದೊಂದು ಸಾಮೂಹಿಕ ಪ್ರಕ್ರಿಯೆ: ಉಮಾಶ್ರೀ

ಕಾಂಗ್ರೆಸ್ ಪಕ್ಷ ಅಂದ್ರೆ ಕೇವಲ ಉಮಾಶ್ರೀ ಅಲ್ಲ, ಒಬ್ಬ ವ್ಯಕ್ತಿ ಅಲ್ಲ. ಅದೊಂದು ಸಾಮೂಹಿಕ ಪ್ರಕ್ರಿಯೆ, ಅದೊಂದು ಸಂಘಟನಾತ್ಮಕ ಶಕ್ತಿ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ಉಮಾಶ್ರೀ
author img

By

Published : Mar 20, 2019, 11:15 PM IST

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ನಗುವಂತೆ ಮಾಡಲು ನಮ್ಮ ಮನಸ್ಸುಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮಾಜಿ ಸಚಿವೆ ಉಮಾಶ್ರೀ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ತೇರದಾಳ ಮತಕ್ಷೇತ್ರದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಅಂದರೆ ಕೇವಲ ಉಮಾಶ್ರೀ ಅಲ್ಲ, ಅಥವಾ ಯಾರೋ ಒಬ್ಬ ವ್ಯಕ್ತಿ ಅಲ್ಲ. ಅದೊಂದು ಸಾಮೂಹಿಕ ಪ್ರಕ್ರಿಯೆ, ಸಂಘಟನಾತ್ಮಕ ಶಕ್ತಿ. ಪಕ್ಷದ ಸಿದ್ದಾಂತಗಳನ್ನು ನಂಬಿ ನಡೆಯಿರಿ. ಬಿಜೆಪಿಯವರು ಏನು ಅರಿಯದ ಯುವ ಸಮೂಹಕ್ಕೆ ಭ್ರಮೆಯನ್ನು ತುಂಬಿ, ಇತಿಹಾಸ ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‍ನ ಶಕ್ತಿಯನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಎಲ್ಲರ ಕಾಂಗ್ರೆಸ್ ಎಂಬ ಅಭಿಮಾನವನ್ನು ಬೆಳೆಸಿಕೊಳ್ಳಿ. ಸ್ವಾರ್ಥಕ್ಕಾಗಿ ದುಡಿಯದೇ ಕಾಂಗ್ರೆಸ್ ಪಕ್ಷಕ್ಕೆ ದುಡಿಯಿರಿ ಎಂದು ಉಮಾಶ್ರೀ ಸಲಹೆ ನೀಡಿದರು.

ಎಲ್ಲರನ್ನು ಒಗ್ಗೂಡಿಸಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸೋಣ. ಎಲ್ಲವನ್ನು ಸಹಿಸಿಕೊಳ್ಳುವವನಿಗೆ ನಾಯಕತ್ವ ಗುಣ ಇರುತ್ತದೆ. ನಿಮ್ಮ ನಿಮ್ಮಲ್ಲಿರುವ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷವನ್ನು ಗಟ್ಟಿಗೊಳಿಸಿ ಎಂದು ಉಮಾಶ್ರೀ ಕರೆಕೊಟ್ಟರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.