ETV Bharat / state

ಗೋವಿಂದ ಕಾರಜೋಳ - ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆ.. ಸಿಎಂ ಬೊಮ್ಮಾಯಿ ಭಾಗಿ.. ಶೆಟ್ಟರ್​ಗೆ ಟಾಂಗ್​

ಜಗದೀಶ್​ ಶೆಟ್ಟರ್ ಕಾಂಗ್ರೆಸ್​ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Apr 18, 2023, 7:41 PM IST

Updated : Apr 18, 2023, 8:08 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಾಗಲಕೋಟೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಸಚಿವ ಗೋವಿಂದ ಕಾರಜೋಳ ಹಾಗೂ ಮುರುಗೇಶ ನಿರಾಣಿ ಅವರು ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದರು. ಮುಧೋಳ ನಗರದ ತಹಶೀಲ್​​ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಮುಂಚೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ತೊಂದರೆ ಇಲ್ಲ, ಲಿಂಗಾಯತರಿಗೆ ಸಮರ್ಪಕವಾಗಿ ಮನ್ನಣೆ ನೀಡಿದ್ದು ಬಿಜೆಪಿ. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನ ಕಡೆಗಣಿಸುತ್ತಾ ಬಂದಿದೆ ಎಂದ ಅವರು, ಬಿಜೆಪಿ ಪಕ್ಷ ಯಾರ ಕಪಿ ಮುಷ್ಠಿಯಲ್ಲೂ ಇಲ್ಲ. ಅದೊಂದು ಯೋಜನಾ ಬದ್ಧ ಪಕ್ಷವಾಗಿದೆ. ಯಾರಿಗೆ ಯಾರೂ ಟಿಕೆಟ್ ತಪ್ಪಿಸಿಲ್ಲ. ಹೈಕಮಾಂಡ್ ನಾಯಕರು ಎಲ್ಲ ನೋಡಿಕೊಂಡು ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

ಸಚಿವ ಗೋವಿಂದ ಕಾರಜೋಳ ಪರವಾಗಿ ಮತಯಾಚನೆ: ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟ್ ಬಿಜೆಪಿ ಪಡೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಧೋಳ ನಗರದ ರನ್ನ ವೃತ್ತದಲ್ಲಿ ಬಹಿರಂಗ ಭಾಷಣ ಮಾಡಿದರ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಇದೇ ವೇಳೆ ಸಿಎಂ ವ್ಯಂಗ್ಯವಾಡಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅದು ಚುನಾವಣೆವರೆಗೂ ಮಾತ್ರ. ಆ ಬಳಿಕ ಅದು ಗಳಗಂಟಿ(ಘಂಟೆ) ಆಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಮುಧೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಗೋವಿಂದ ಕಾರಜೋಳ ಪರವಾಗಿ ಇದೇ ವೇಳೆ ಸಿಎಂ ಭರ್ಜರಿಯಾಗೇ ಮತಯಾಚನೆ ಮಾಡಿದರು.

ಇದನ್ನೂ ಓದಿ: ಇನ್ಮುಂದೆ ಅವರ ದಾರಿ ಅವರದು, ನಮ್ಮ ದಾರಿ ನಮ್ಮದು: ಬಿ.ಎಸ್.ಯಡಿಯೂರಪ್ಪ

ನಮ್ಮ ಸರ್ಕಾರ ಸಾಮಾಜಿಕ ಕ್ರಾಂತಿ ಮಾಡಿದೆ. ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನ ತೆಗೆದುಕೊಂಡಿದೆ. ಕಾರಜೋಳರನ್ನ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಸಿಎಂ ಮನವಿ ಮಾಡಿಕೊಂಡರು. ನಂತರ ಬೀಳಗಿ ಮತಕ್ಷೇತ್ರಕ್ಕೆ ತೆರಳಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸಚಿವ ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಇಬ್ಬರಿಗೆ 2 ಕ್ಷೇತ್ರಗಳಿಗೆ ಟಿಕೆಟ್​: ಇದು ರಾಜಕೀಯ ತಂತ್ರವೆಂದ ಸಿಎಂ ಬೊಮ್ಮಾಯಿ

ನಾಮಪತ್ರ ಸಲ್ಲಿಸಿದ ಮುರುಗೇಶ್​ ನಿರಾಣಿ: ಬೀಳಗಿಯ ಶಿವಾಜಿ ಸರ್ಕಲ್‌ನಿಂದ ತಹಶೀಲ್ದಾರ್ ಕಚೇರಿವರೆಗೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸಿಎಂ ಬಸವರಾಜ‌‌ ಬೊಮ್ಮಾಯಿ, ಸಚಿವ ಮುರುಗೇಶ ನಿರಾಣಿ, ಸಚಿವ ಗೋವಿಂದ ಕಾರಜೋಳ ಭಾಗಿಯಾಗಿದ್ದರು. ಮೆರವಣಿಗೆ ಬಳಿಕ ಬೀಳಗಿ ಪಟ್ಟಣದ ತಹಶೀಲ್ದಾರ್​ ಕಚೇರಿಯಲ್ಲಿ ಸಚಿವ ಮುರುಗೇಶ್​ ನಿರಾಣಿ ನಾಮಪತ್ರ ಸಲ್ಲಿಸಿದರು. ನಂತರ ಸಚಿವ ಮುರುಗೇಶ್​​ ನಿರಾಣಿ ಅವರ ಮನೆ ಎದುರು ಇರುವ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿ, ಸಿದ್ದರಾಮಯ್ಯ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!

Last Updated : Apr 18, 2023, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.