ETV Bharat / state

ಕೋವಿಡ್​-19 ಮುಕ್ತ ಭಾರತಕ್ಕೆ ದೇಣಿಗೆಯ ಸುರಿಮಳೆ - ಮುಖ್ಯಮಂತ್ರಿ ಪರಿಹಾರ ನಿಧಿ 20ಲಕ್ಷ ಪರಿಹಾರ

ಎಪಿಎಂಸಿ‌ ವತಿಯಿಂದ 20 ಲಕ್ಷ ರೂ. ಪರಿಹಾರ ಧನ‌ ನೀಡಲಾಗಿದೆ. ಹೀಗೆ ಜಿಲ್ಲೆಯ ವಿವಿಧ ಸಂಘ - ಸಂಸ್ಥೆಗಳು ಪರಿಹಾರ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿವೆ.

Chief Minister's Relief Fund 20 Lakhs Relief
ಚೆಕ್​ ಹಸ್ತಾಂತರ
author img

By

Published : Apr 2, 2020, 8:12 PM IST

ಬಾಗಲಕೋಟೆ: ಕೋವಿಡ್​​-19 ಮುಕ್ತ ಭಾರತಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ವೈದ್ಯರು ಸೇರಿದಂತೆ ಹಲವರು ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಗರದ ವೈದ್ಯ ಡಾ.ಬಿ.ಎಚ್.ಕೆರೂಡಿ, ತಮ್ಮ ಆಸ್ಪತ್ರೆಯ ಪರವಾಗಿ 10 ಲಕ್ಷ ಪರಿಹಾರ ಧನ‌ದ ಚೆಕ್ ಅನ್ನು ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಅವರಿಗೆ ಹಸ್ತಾಂತರಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಎಸ್​​.ಆರ್​​.ಪಾಟೀಲ್ ಸಹ ತಮ್ಮ ಸಂಸ್ಥೆಗಳ ಮೂಲಕ 10 ಲಕ್ಷ ದೇಣಿಗೆ ನೀಡಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರ ರಾಜರಾಜೇಶ್ವರಿ ಸಹಕಾರಿ ಪತ್ತಿನ ಸಂಘ ಹಾಗೂ ಮಾತಾ ಪತ್ತಿನ ಸಹಕಾರಿ ಸಂಘದಿಂದ ಜಿಲ್ಲಾಧಿಕಾರಿಗೆ 60,000ರೂ. ಚೆಕ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.