ETV Bharat / state

ಚಾಲುಕ್ಯ ದರ್ಶನ ಬಸ್​: ಒಂದೇ ದಿನದಲ್ಲಿ ಬಾಗಲಕೋಟೆಯ ಎಲ್ಲ ಪ್ರವಾಸಿ ತಾಣಗಳನ್ನು ವೀಕ್ಷಿಸಿ - ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬಸ್​

ಸಾರಿಗೆ ಸಂಸ್ಥೆ ವತಿಯಿಂದ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಸಂಚಾರಕ್ಕೆ ಚಾಲುಕ್ಯ ದರ್ಶನ ಹೆಸರಿನಲ್ಲಿ ಒನ್​ ಡೇ ವಿಶೇಷ ಬಸ್ ಸಂಚಾರ ಆರಂಭಿಸಲಾಗಿದೆ.

chalukya darshana bus
ಚಾಲುಕ್ಯ ದರ್ಶನ ಬಸ್
author img

By

Published : Jul 20, 2021, 12:23 PM IST

ಬಾಗಲಕೋಟೆ: ಸಾರಿಗೆ ಸಂಸ್ಥೆಯ ಸಂಚಾರ ಹಾಗೂ ಪ್ರವಾಸಿ ತಾಣಗಳಿಗೆ ಹೋಗುವ ಜನರ ಸಂಖ್ಯೆ ಕಡಿಮೆ ಆದ ಹಿನ್ನೆಲೆ, ಸಾರಿಗೆ ಸಂಸ್ಥೆ ವತಿಯಿಂದ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಸಂಚಾರಕ್ಕೆ ಒನ್​ ಡೇ ವಿಶೇಷ ಬಸ್ ಸಂಚಾರ ಆರಂಭಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಯತ್ನ ನಡೆದಿದೆ.

ಚಾಲುಕ್ಯ ದರ್ಶನ ಬಸ್​ಗೆ ಪೂಜೆ, ಚಾಲನೆ

ಚಾಲುಕ್ಯ ದರ್ಶನ:

ಜಿಲ್ಲೆಯಲ್ಲಿ ಚಾಲುಕ್ಯ ದರ್ಶನ ಹೆಸರಿನಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭದ ಹಿನ್ನೆಲೆ ನವನಗರದ ಬಸ್ ನಿಲ್ದಾಣದಲ್ಲಿ ಬಸ್​ಗೆ ಪೂಜೆ ಸಲ್ಲಿಸಲಾಯಿತು. ಸಾರಿಗೆ ಸಂಸ್ಥೆಯ ಡಿಸಿ ಬಸವರಾಜ್ ಅಮ್ಮಣ್ಣವರ ನೇತೃತ್ವದಲ್ಲಿ ಬಸ್​ಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.

240 ರೂ. ದರ ನಿಗದಿ:

ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗಿ ಮಂದಿರ, ಕೂಡಲಸಂಗಮ, ಆಲಮಟ್ಟಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಈ ಬಸ್​ ಸಂಚರಿಸಲಿದೆ. ಒಂದೇ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳಲು 240 ರೂ. ದರ ನಿಗದಿ ಮಾಡಿದ್ದು, ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಜಿಲ್ಲಾಮಟ್ಟದ ಅಧಿಕಾರಿ ಬಸವರಾಜ್ ಅಮ್ಮಣ್ಣವರ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಎಲ್ಲ ಪ್ರವಾಸಿ ತಾಣಗಳ ಭೇಟಿ:

ಪ್ರತಿ ದಿನ ನವನಗರದ ಬಸ್ ನಿಲ್ದಾಣದಿಂದ ಬೆಳಗ್ಗೆ 8:30ರಿಂದ ರಾತ್ರಿ 8:30ರವರೆಗೆ ಸಂಚರಿಸುವ ಈ ಬಸ್​​​ಗೆ ಚಾಲುಕ್ಯ ದರ್ಶನ ಎಂಬ ಹೆಸರು ನಾಮಕರಣ ಮಾಡಲಾಗಿದೆ. ಒಂದೇ ಬಸ್ ಮೂಲಕ ಒಂದೇ ದಿನದಲ್ಲಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ದಶ೯ನಕ್ಕೆ ಅವಕಾಶ ನೀಡಲಾಗಿದೆ. ವಿಶೇಷ ಅಲಂಕಾರ ಸಹಿತ ಪೂಜೆ ನೆರವೇರಿಸಿ, ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಚರ್ಚೆ ಅಪ್ರಸ್ತುತ : ಸಿದ್ದರಾಮಯ್ಯ

ಪ್ರಯಾಣಿಕರಿಗೆ ಒಂದೇ ದಿನದಲ್ಲಿ ಜಿಲ್ಲೆಯ ಪ್ರವಾಸಿ ತಾಣ ನೋಡಲು ಸಾಧ್ಯವಾಗುತ್ತಿರಲಿಲ್ಲ. ಚಾಲುಕ್ಯ ದರ್ಶನ ಸಂಚಾರದಿಂದ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಮಾಡಿಕೂಡಲಾಗಿದೆ. ಈ ಮೂಲಕ ಜಿಲ್ಲೆಯ ಐತಿಹಾಸಿಕ ಸ್ಥಳ ವೀಕ್ಷಣೆ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸಾರಿಗೆ ಸಂಸ್ಥೆಗೂ ಲಾಭ ಆಗುವ ದೃಷ್ಟಿಯಿಂದ ಇಂತಹ ನೂತನ ಯೋಜನೆ ಮಾಡಿರುವುದು ಗಮನ ಸೆಳೆಯುವಂತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.