ಬಾಗಲಕೋಟೆ: ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಜಿ.ಪಂ. ಸಿಇಒ ಟಿ. ಭೂಬಾಲನ್ ನೇತೃತ್ವದ ತಂಡ ಬಾದಾಮಿಯ ವಿವಿಧ ಸ್ಮಾರಕಗಳನ್ನು ಪರಿಶೀಲಿಸಿತು.
2020-21ನೇ ಸಾಲಿನ ಬಜೆಟ್‍ನಲ್ಲಿ 25 ಕೋಟಿ ರೂ. ಘೋಷಣೆಯಾದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಕ್ಕೆ ವಿವಿಧ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ, ಪೂರ್ವಭಾವಿಯಾಗಿ ಇಲ್ಲಿನ ವಿವಿಧ ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಪರಿಶೀಲನೆ ನಡೆಸಲಾಯಿತು. ಜೊತೆಗೆ ಮನೆಗಳ ಸ್ಥಳಾಂತರ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಯಿತು.
![CEO and his group visits badami](https://etvbharatimages.akamaized.net/etvbharat/prod-images/06:04:12:1594989252_kn-bgk-03-ceo-badami-av-script-7202182_17072020173044_1707f_1594987244_509.jpg)
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ ಅಧಿಕಾರಿಗಳಿಗೆ ತಿಳಿಸಿದರು. ಈ ಕುರಿತಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.
ಪರಿಶೀಲನೆ ವೇಳೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡೋಂಬರ, ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ ಮೋವೆಂದ್ರನ್, ಮೌನೇಶ ಕುರುವಟ್ಟಿ, ಟೂರಿಸಂ ಕನ್ಸಲ್ಟೆಂಟ್ ಅನೀಲ ಕುಮಾರ ಸೇರಿದಂತೆ ಇತರರು ಇದ್ದರು.