ETV Bharat / state

ಐಹೊಳೆಯ ಈ ಮನೆಯಲ್ಲಿವೆ 150 ವರ್ಷ ಹಳೇಯ ತಾಳೆ ಗರಿಯ ಗ್ರಂಥಗಳು - ಬಾಗಲಕೋಟೆ

ರೇವಣ ಸಿದ್ದಯ್ಯ ಕಲ್ಮಠ ಹಾಗೂ ಅವರ ಪುತ್ರ ವಿರುಪಾಕ್ಷಯ್ಯ ಕಲ್ಮಠ ಬಾಗಲಕೋಟೆ ಜಿಲ್ಲೆಯ ಐಹೊಳೆ ನಿವಾಸಿಗಳಾಗಿದ್ದು, ಇವರ ಮನೆಯಲ್ಲಿ 150 ವರ್ಷಗಳಷ್ಟು ಹಳೆಯ ತಾಳೆ ಗರಿಯಲ್ಲಿ ಬರೆದಿರುವ ಗ್ರಂಥಗಳಿವೆ.

bagalkot
ಬಾಗಲಕೋಟೆ
author img

By

Published : Jun 23, 2021, 10:31 AM IST

Updated : Jun 23, 2021, 2:00 PM IST

ಬಾಗಲಕೋಟೆ: ಈ ಅಜ್ಜನ ವಯಸ್ಸು 101. ಈಗಲೂ ಸಂಸ್ಕೃತ ಶ್ಲೋಕಗಳನ್ನು ಸರಾಗವಾಗಿ ಹೇಳುವ ಮೂಲಕ ಯುವಕರಿಗೆ ಸವಾಲು ಹಾಕಬಲ್ಲರು. ಇವರ ಬಳಿ 150 ವರ್ಷಗಳ ಹಿಂದೆ ತಾಳೆ ಗರಿಯಲ್ಲಿ ಬರೆದಿರುವ ಗ್ರಂಥಗಳಿವೆ. ಇಂದಿನ ಮೊಬೈಲ್ ಯುಗದಲ್ಲಿ ಇಂತಹ ಬರವಣಿಗೆ ಬಗ್ಗೆ ಗೊತ್ತಿಲ್ಲದ ಯುವ ಜನತೆಗೆ ಮಾಹಿತಿ ನೀಡಲು ತಾಳೆ ಗರಿಗಳನ್ನು ಇನ್ನೂ ಸಂರಕ್ಷಿಸಿಕೊಂಡು ಬಂದಿದ್ದಾರೆ.

ಐಹೊಳೆಯ ಈ ಮನೆಯಲ್ಲಿದೆ ಶತಮಾನದ ತಾಳೆಗರಿ ಗ್ರಂಥ ಸಂಗ್ರಹ..

ರೇವಣ ಸಿದ್ದಯ್ಯ ಕಲ್ಮಠ ಹಾಗೂ ಅವರ ಪುತ್ರ ವಿರುಪಾಕ್ಷಯ್ಯ ಕಲ್ಮಠ ಎಂಬ ಇವರು ಬಾಗಲಕೋಟೆ ಜಿಲ್ಲೆಯ ಐಹೊಳೆ ನಿವಾಸಿಗಳು. ವಯೋವೃದ್ಧರಾದ ರೇವಣ ಸಿದ್ದಯ್ಯ ಕಲ್ಮಠ ಸಂಸ್ಕೃತ ಹಾಗೂ ಜೋತಿಷ್ಯ ಪಂಡಿತರಾಗಿದ್ದು, ಅವರ ಪುತ್ರ ವಿರುಪಾಕ್ಷಯ್ಯ ಸಹ ಸಂಸ್ಕೃತ ಅಧ್ಯಯನ ಮಾಡಿ, ಬೆಂಗಳೂರಿನಲ್ಲಿ ಅಧ್ಯಾಪಕರಾಗಿ ಈಗ ನಿವೃತ್ತರಾಗಿದ್ದಾರೆ. ಸದ್ಯ ಜ್ಯೋತಿಷ್ಯ, ನೂತನ ಮನೆಯ ಪೂಜೆ, ವಾಸ್ತು ಶಾಂತಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

150 ವರ್ಷದ ಜ್ಯೋತಿಷ್ಯ ಪುಸ್ತಕ:

ಇವರ ಬಳಿ 150 ವರ್ಷದ ಜ್ಯೋತಿಷ್ಯ ಪುಸ್ತಕ ಹಾಗೂ ಹಿಂದಿನ ಕಾಲದ ತಾಳೆ ಮರದ ಗರಿಯಲ್ಲಿ ಬರೆದ ಗ್ರಂಥಗಳಿವೆ. ಬಸವ ಪುರಾಣ, ಅಮರೇಶ್ವರ ಚರಿತ್ರೆ ಸೇರಿ ಇತರ ಗ್ರಂಥಗಳೂ ಇವೆ. ಆಗಿನ ಕಾಲದಲ್ಲಿ ಮಸಿಯಿಂದ ತಾಳೆ ಮರದ ಗರಿಯಲ್ಲಿ ಹಾಗೂ ಕಾಗದಲ್ಲಿ ಕೈ ಬರಹದ ಗ್ರಂಥಗಳನ್ನು ಬರೆಯುತ್ತಿದ್ದರು. ಇಂತಹ ಗ್ರಂಥಗಳಲ್ಲಿ ಕೆಲವೊಂದನ್ನು ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಈಗಿನ ಕಾಲದಲ್ಲಿ ಎಲ್ಲವೂ ಮೊಬೈಲ್ ಹಾಗೂ ಕಂಪ್ಯೂಟರ್​​ಗೆ ಸಿಮೀತವಾಗಿದ್ದರಿಂದ ಇನ್ನೂ ಕೆಲವೊಂದು ಗ್ರಂಥವನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಯುವಕರು ಬಂದು ಗ್ರಂಥವನ್ನು ಅಧ್ಯಯನ ಮಾಡಬಹುದು. ಮುಂದಿನ ಪೀಳಿಗೆ ಈ ರೀತಿ ಬರಹಗಳು ಇದ್ದವು ಎಂಬ ಮಾಹಿತಿಗಾಗಿ ಸಂರಕ್ಷಣೆ ಮಾಡಲಾಗಿದೆ ಎನ್ನುತ್ತಾರೆ ವಿರುಪಾಕ್ಷಯ್ಯ ಕಲ್ಮಠ.

ಯಾವುದೇ ತಂತ್ರಜ್ಞಾನ ಇಲ್ಲದ ಆ ಕಾಲದಲ್ಲಿ ಹೀಗೆ ತಾಳೆ ಮರದ ಗರಿಯಲ್ಲಿ ಹಾಗೂ ಕಾಗದದಲ್ಲಿ ಕೈ ಬರಹದ ಗ್ರಂಥವನ್ನು ರಚನೆ ಮಾಡುತ್ತಿದ್ದರು. ಹಳೆಗನ್ನಡ ಹಾಗೂ ಸಂಸ್ಕೃತದಲ್ಲಿ ಈ ಗ್ರಂಥಗಳನ್ನು ಬರೆಯಲಾಗಿದೆ. ನಮ್ಮ ತಂದೆ, ತಾತಂದಿರು ಹಲವು ಗ್ರಂಥಗಳನ್ನು ಹಾಗೂ ಜೋತಿಷ್ಯ ಪುಸ್ತಕವನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ರೇವಣ ಸಿದ್ದಯ್ಯ ಕಲ್ಮಠ ತಿಳಿಸಿದ್ದಾರೆ.

ಇದನ್ನೂ ಓದಿ: ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ

Last Updated : Jun 23, 2021, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.