ಬಾಗಲಕೋಟೆ: ಉತ್ತರ ಕರ್ನಾಟಕದಲ್ಲೇ ವಿಶಿಷ್ಟವಾಗಿ ಆಚರಿಸುವ ಗುಲಾಲ್ ಜಾತ್ರೆ ನಿಮಿತ್ತ ಶ್ರೀಜ್ಯೋತಿಬಾ ದೇವರ ಜಾತ್ರಾ ಮಹೋತ್ಸವವು ಅತಿ ವಿಜೃಂಭಣೆಯಿಂದ ಆಸಂಗಿ ಗ್ರಾಮದಲ್ಲಿ ನೆರವೇರಿತು.
ಇದು ಗುಲಾಲ್ ಜಾತ್ರೆ ಎಂದೇ ಪ್ರಸಿದ್ದಿಯಾಗಿದ್ದು, ಸುಮಾರು 10-15 ಕ್ವಿಂಟಾಲ್ಗಿಂತಲೂ ಹೆಚ್ಚಿನ ಪ್ರಮಾಣದ ಗುಲಾಲ್ ಎರಚುವುದು ವಿಶೇಷತೆ. ಮಹಾರಾಷ್ಟ್ರ ನಂತರ ಇಲ್ಲಿ ಅತಿ ಹೆಚ್ಚಿನ ಪ್ರಮಾಣದ ಗುಲಾಲನ್ನು ಬಳಸಲಾಗುತ್ತದೆ. ಗ್ರಾಮದ ಪ್ರತಿಯೊಬ್ಬರು ಈ ಜಾತ್ರೆಯಲ್ಲಿ ಪಾಲ್ಗೊಂಡು ಜ್ಯೋತಿಬಾ ದರ್ಶನ ಪಡೆಯುತ್ತಾರೆ.
ದೇವರ ಮೊರೆ ಹೋದ ಬಿಜೆಪಿ ಅಭ್ಯರ್ಥಿ...
ಇನ್ನು ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಈ ಬಾರಿ ನಾಲ್ಕನೇ ಬಾರಿಯ ಗೆಲುವಿಗಾಗಿ ದೇವರ ಮೊರೆ ಹೋಗಿದ್ದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಹಂತಗಳಲ್ಲಿ ಮುಗಿದಿದೆ. ನಿರಂತರ ಒಂದು ತಿಂಗಳ ಕಾಲ ಇಡೀ ಬಾಗಲಕೋಟೆ ಲೋಕಸಭಾ ಕ್ಷೇತ್ರದಾದ್ಯಂತ ಅವಿರತವಾಗಿ ಸಂಚಾರ ನಡೆಸಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಗದ್ದಿಗೌಡರ ಅವರು, ಜ್ಯೋತಿಬಾ ದೇವರ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು.