ಬಾಗಲಕೋಟೆ: ಸ್ಥಳೀಯ ಯುವಕ ಸಂಘಟನೆಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಬೈಕ್ ರೇಸ್ ನಡೆಯಿತು.
ನವನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬೈಕ್ ದರ್ಟ್ ರೇಸ್ ಪಂದ್ಯಾವಳಿ ನಡೆಯಿತು. ಸ್ಥಳೀಯ ಬಿಜೆಪಿ ಪಕ್ಷದ ಯುವ ಧುರೀಣ ಸಂತೋಷ ಹೋಕ್ರಾಣಿ ಹಾಗೂ ರಾಜು ನಾಯಕ ಬೈಕ್ ರೇಸ್ಗೆ ಚಾಲನೆ ನೀಡಿದರು.
ಮಣ್ಣಿನ ಮೈದಾನದಲ್ಲಿ ತಯಾರಾಗಿದ್ದ ಟ್ರಾಕ್ ರೇಸ್ನಲ್ಲಿ ಬೈಕ್ ಸವಾರರು ಸಾಹಸ ಪ್ರದರ್ಶನ ಮಾಡಿದರು. ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ರೋಮಾಂಚಕಾರಿ ಬೈಕ್ ರೇಸ್ ನಡೆಯಿತು. ಮಹಾರಾಷ್ಟ್ರದ ಸಾಂಗ್ಲಿ, ಪೂನಾ, ಇಚಲಕರಂಜಿ ಹಾಗೂ ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಸ್ಪರ್ಧಿಗಳು ಆಗಮಿಸಿ ಬೈಕ್ ರೇಸ್ನಲ್ಲಿ ಭಾಗವಹಿಸಿದರು.
ರೇಸ್ನಲ್ಲಿ 50ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು ಭಾಗವಹಿಸಿದ್ದರು. ಹಾಸನ ಜಿಲ್ಲೆಯ ಅರುಣ ಎಂಬುವ ಸ್ಪರ್ಧಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡರು.