ETV Bharat / state

ರಾಜ್ಯ ಬಜೆಟ್​ 2021: ಬಾಗಲಕೋಟೆ ನೇಕಾರರ ಬೇಡಿಕೆಗಳಿವು - ಬಾಗಲಕೋಟೆ ನೇಕಾರರ ಬೇಡಿಕೆಗಳಿವು

ಸಿಎಂ ಬಿ.ಎಸ್​.ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಬಜೆಟ್​ ಮಂಡನೆ ಮಾಡಲಿದ್ದಾರೆ. ಬಜೆಟ್​ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೇಕಾರಿಕೆ ವೃತ್ತಿ ಅವಲಂಬಿಸಿರುವ ಅನೇಕ ಕಾರ್ಮಿಕರು ಈ ಬಾರಿಯ ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ತಮ್ಮ ಸಮಸ್ಯೆ ಪರಿಹರಿಸಲಿದ್ದಾರೆ ಎಂಬ ನಿರೀಕ್ಷಯನ್ನು ಹೊಂದಿದ್ದು, ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

ಬಾಗಲಕೋಟೆ ನೇಕಾರರ ಬೇಡಿಕೆಗಳಿವು
Bagalkot Weavers lot of hope in State Budget 2021
author img

By

Published : Mar 3, 2021, 7:29 AM IST

Updated : Mar 3, 2021, 7:44 AM IST

ಬಾಗಲಕೋಟೆ: ಇನ್ನು ಕೆಲವೇ ದಿನಗಳಲ್ಲಿ ಸಿಎಂ ಬಿ.ಎಸ್.​ ಯಡಿಯೂರಪ್ಪ ರಾಜ್ಯ ಬಜೆಟ್​ ಮಂಡನೆ ಮಾಡಲಿದ್ದು, ಜಿಲ್ಲೆಯ ಜನತೆ ಸಾಕಷ್ಟು ಭರವಸೆ ಹೊಂದಿದ್ದಾರೆ. ಅದರಂತೆ ಅನೇಕ ವರ್ಷಗಳಿಂದ ನೇಕಾರಿಕೆ ವೃತ್ತಿ ಮಾಡುತ್ತಿರುವ ಕಾರ್ಮಿಕರು, ಸಿಎಂ ಈ ಬಾರಿಯ ಬಜೆಟ್​ನಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂಬ ಭರವಸೆ ಹೊಂದಿದ್ದಾರೆ.

ಬಾಗಲಕೋಟೆ ನೇಕಾರರ ಬೇಡಿಕೆಗಳಿವು

ಜಿಲ್ಲೆಯಲ್ಲಿ ರಬಕವಿ ಬನಹಟ್ಟಿ, ಮಹಾಲಿಂಗಪುರ, ಇಲಕಲ್ಲ, ಕಮತಗಿ, ಗುಳೇದಗುಡ್ಡ ಹಾಗೂ ಅಮೀನಗಡ, ಗುಡೂರು ಸೇರಿದಂತೆ ಇತರ ಚಿಕ್ಕಪುಟ್ಟ ಗ್ರಾಮದಲ್ಲಿ ಲಕ್ಷಾಂತರ ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿವೆ. ಅಲ್ಲದೇ ಕೆಲ ದಿನಗಳಿಂದ ಪೆಟ್ರೋಲ್​, ಡಿಸೇಲ್​, ಸಿಲಿಂಡರ್​ ಗ್ಯಾಸ್​ಗಳ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ನಿತ್ಯ ದುಡಿದು ಒಪ್ಪಿತ್ತಿನ ಹೊಟ್ಟೆ ತುಂಬಿಸಿಕೊಳ್ಳುವಂತ ಬಡ ಕುಟುಂಬದವರು ಕಂಗಲಾಗಿದ್ದಾರೆ. ಈ ಮಧ್ಯೆ ಮಂಡನೆ ಆಗಲಿರುವ ಬಜೆಟ್​ನಲ್ಲಿ ನೇಕಾರರಿಗೆ ಹೆಚ್ಚಿನ ಆದತ್ಯೆ ನೀಡಿ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಲಿದ್ದಾರೆ ಎಂದು ನೇಕಾರರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಈಗಾಗಲೇ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದಿಂದ ಬಜೆಟ್​ನಲ್ಲಿ 425 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೇ ವೃತ್ತಿಪರ ನೇಕಾರರು ಅನೇಕ ವರ್ಷಗಳಿಂದ ಬರಗಾಲ, ಅತಿವೃಷ್ಟಿ, ನೋಟ್ ಬ್ಯಾನ್, ಜಿಎಸ್​​​ಟಿ ಹಾಗೂ ‌ಕೊರೊನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ಕಂಗಲಾಗಿದ್ದಾರೆ. ಲಾಕ್​​​​ಡೌನ್ ಸಮಯದಲ್ಲಿ 70 ವರ್ಷದ ಇತಿಹಾಸದಲ್ಲಿಯೇ 21 ಜನ ವೃತ್ತಿ ಪರ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಮಾತ್ರ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದರೆ, ಉಳಿದವರು ಸಾಲ ಶೂಲಕ್ಕಾಗಿ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Bagalkot Weavers lot of hope in State Budget 2021
ಸಂಕಷ್ಟದಲ್ಲಿ ನೇಕಾರರ ಬದುಕು

ಓದಿ: ರಾಸಲೀಲೆ ವಿಡಿಯೋ ಫೇಕ್, ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಸಚಿವ ರಮೇಶ್ ಜಾರಕಿಹೊಳಿ

ರಾಜ್ಯದಲ್ಲಿ 66 ಲಕ್ಷ ವೃತ್ತಿಪರ ನೇಕಾರರು, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಅಭಿವೃದ್ಧಿಗಾಗಿ ಈ ಬಾರಿ ಬಜೆಟ್​​ನಲ್ಲಿ 425 ಕೋಟಿ ಹಣ ಮೀಸಲು ಇಟ್ಟು ಅಭಿವೃದ್ಧಿ ಪಡಿಸಬೇಕಾಗಿದೆ.

ಪ್ರಮುಖವಾಗಿ ಈ ಭಾರಿ ಬಜೆಟ್​​ನಲ್ಲಿ ನೇಕಾರರು ಇಟ್ಟುಕೊಂಡಿರುವ ಬೇಡಿಕೆಗಳು:

  • ವೃತ್ತಿಪರ ನೇಕಾರರನ್ನು ಕಾರ್ಮಿಕರು ಎಂದು ಪರಿಗಣಿಸಿ ಕಟ್ಟಡ ಕಾರ್ಮಿಕರಗಿರುವ ಸೌಲಭ್ಯಗಳನ್ನು ಜಾರಿ ಮಾಡಬೇಕು
  • ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಬೇಕು
  • ನೇಕಾರರ ಸಮ್ಮಾನ ಯೋಜನೆಗೆ ವಿದ್ಯುತ್ ಚಾಲಿತ ಮಗ್ಗಗಳ ಕೂಲಿ ಕಾರ್ಮಿಕರ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರನ್ನು ಒಳಪಡಿಸಿ,ವಾರ್ಷಿಕ ಕನಿಷ್ಠ 10 ಸಾವಿರ ರೂಪಾಯಿಗಳನ್ನ ಜಾರಿ ಮಾಡಬೇಕು.
  • ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್​​ನ ಸಂಪೂರ್ಣ ಸಾಲಮನ್ನಾ ಮಾಡಬೇಕು
  • 21 ಜನ ವೃತ್ತಿಪರ ನೇಕಾರರ ಸರಣಿ ಆತ್ಮಹತ್ಯೆ ಮತ್ತು ಇಬ್ಬರು ವಿದ್ಯುತ್ ಅವಘಡಗಳಿಗೆ ಬಲಿಯಾದ ವೃತ್ತಿಪರ ನೇಕಾರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು
  • ಉಚಿತ ವಿದ್ಯುತ್ ಹಾಗೂ 2 ಉಚಿತ ಮಗ್ಗಗಳ ವೃತ್ತಿಪರ ನೇಕಾರರ ಜಾರಿ ಮಾಡಬೇಕು
  • ಆರ್ಥಿಕ ಮತ್ತು ಔದ್ಯೋಗಿಕವಾಗಿ ನೇಕಾರರನ್ನು ಸಬಲಗೊಳಿಸಲು ಮಹಾಮಂಡಳ ರಚನೆ ಮಾಡಬೇಕು
  • 55 ವರ್ಷದ ನೇಕಾರರಿಗೆ 5 ಸಾವಿರ ರೂ ಮಾಶಾಸನ ಜಾರಿ ಮಾಡಬೇಕು
  • ಕೆ.ಎಚ್.ಡಿ ಸಿ ನೇಕಾರರ ಶ್ರೇಯೋಭಿವೃದ್ದಿಗಾಗಿ ಆವೃತ್ತ ನಿಧಿ ಸ್ಥಾಪನೆಯಾಗಬೇಕು. ನಿಗಮದ 110 ಕೋಟಿ ರೂ. ಸಾಲವನ್ನು ಸರಕಾರವೇ ಭರಿಸಬೇಕು
  • ಕೇಂದ್ರದ ಪ್ರಧಾನಮಂತ್ರಿ ಆವಾಸ ಯೋಜನೆಯ ಸಹಾಯವನ್ನು ಫಲಾನುಭವಿಗಳಿಗೆ ತುರ್ತಾಗಿ ಬಿಡುಗಡೆಗೊಳಿಸಬೇಕು

ಈ ಎಲ್ಲಾ ಬೇಡಿಕೆಗಳನನ್ನು ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಇಡೇರಿಸುತ್ತಾರೆಂಬ ಆಶಾಭಾವನೆಯನ್ನು ಇಲ್ಲಿನ ನೇಕಾರರು ಇಟ್ಟುಕೊಂಡಿದ್ದಾರೆ.

Last Updated : Mar 3, 2021, 7:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.