ಬಾಗಲಕೋಟೆ: ಜಿಲ್ಲೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಕೊರೊನಾದಿಂದ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಮುಧೋಳದ 43 ವರ್ಷದ ಪೊಲೀಸ್ ಸಿಬ್ಬಂದಿ ರೋಗಿ-380 ಮತ್ತು ಇವರ 14 ವರ್ಷದ ಮಗ ರೋಗಿ-468 ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಗುಣಮುಖರಾದವರನ್ನು ಚಪ್ಪಾಳೆ ತಟ್ಟುವ ಮೂಲಕ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಮತ್ತು ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಿಸುವ ಮೂಲಕ ಬೀಳ್ಕೊಟ್ಟರು. ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಮೂಲಕ ಅವರನ್ನು ಕಳುಹಿಸಿ ಕೊಡಲಾಯಿತು.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 90 ಸ್ಯಾಂಪಲ್‍ಗಳ ಪೈಕಿ 87 ಸ್ಯಾಂಪಲ್‍ಗಳ ವರದಿ ನೆಗೆಟಿವ್ ಬಂದಿದೆ. ಉಳಿದ 3 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿರುತ್ತವೆ. ಪ್ರತ್ಯೇಕವಾಗಿ ನಿಗಾದಲ್ಲಿ ಒಟ್ಟು 938 ಇದ್ದು, ಇನ್ಸಿಟಿಟ್ಯೂಟ್ ಕ್ವಾರಂಟೈನ್‍ನಲ್ಲಿ 315 ಜನ ನಿಗಾದಲ್ಲಿ ಇದ್ದಾರೆ. ಇಲ್ಲಿಯವರೆಗೆ ಗುಣಮುಖರಾದವರು 31 ಜನ ಇದ್ದು, ಇನ್ನು ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು 29 ಜನ ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್ ಮೆಂಟ್ ಝೋನ್‍ಗಳಿದ್ದು, ಒಟ್ಟು 9 ಸ್ಯಾಂಪಲ್‍ಗಳು ತಿರಸ್ಕೃತಗೊಂಡಿವೆ. 28 ದಿನಗಳ ಹೋಂ ಕ್ವಾರಂಟೈನ್‍ನಿಂದ ಒಟ್ಟು 198 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.