ETV Bharat / state

ಬಾಗಲಕೋಟೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ ಬೀದಿಯಲ್ಲಿ ಸಿಕ್ಕ ರಕ್ತದ ಪ್ಯಾಕೇಟುಗಳು...

ರಕ್ತದ ಪ್ಯಾಕೇಟುಗಳನ್ನು  ಬೀದಿಯಲ್ಲಿ ಎಸೆದಿರುವ ಘಟನೆ ಬಾಗಲಕೋಟೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬೀದಿಯಲ್ಲಿ ದೊರೆತ ರಕ್ತದ ಪ್ಯಾಕೇಟುಗಳು
author img

By

Published : Jul 4, 2019, 12:34 AM IST

Updated : Jul 4, 2019, 10:58 AM IST

ಬಾಗಲಕೋಟೆ: ರಕ್ತ ಅತ್ಯಂತ ಅಮೂಲ್ಯವಾದುದು. ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಪರದಾಡಿದವರಿಗೆ ಮಾತ್ರ ರಕ್ತದ ಮೌಲ್ಯ ಗೊತ್ತು. ಇಂತಹ ಬೆಲೆ ಕಟ್ಟಲಾಗದ ರಕ್ತದ ಪ್ಯಾಕೇಟುಗಳು ಬೀದಿಯಲ್ಲಿ ಎಸೆದರೆ ಹೇಗಿರುತ್ತೆ!?

ಹೌದು ಇಂಥದೊಂದು ಘಟನೆ ನಡೆದಿರುವುದು ಬಾಗಲಕೋಟೆ ನಗರದಲ್ಲಿ. ನಗರದ ಬಸವೇಶ್ವರ ವೃತ್ತದ ಸಮೀಪ ಬಸ್ ನಿಲ್ದಾಣಕ್ಕೆ ತೆರಳುವ ಅಡ್ಡ ರಸ್ತೆ ಬಳಿಯ ಅಂಗಡಿಯೊಂದರ ಬಳಿ ರಕ್ತದ ಪ್ಯಾಕೇಟುಗಳನ್ನು ಬೇಕಾಬಿಟ್ಟಿ ಎಸೆಯಲಾಗಿದೆ.

ಇಲ್ಲಿ ಅಕ್ಕಪಕ್ಕ ಯಾವುದೇ ಆಸ್ಪತ್ರೆ ಇಲ್ಲವಾದರೂ ಇಂತಹ ಸ್ಥಳದಲ್ಲಿ ರಕ್ತದ ಪ್ಯಾಕೇಟುಗಳು ದೊರೆತಿರುವುದು ಚರ್ಚೆಗೆ ಗ್ರಾಸವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಪೊಲೀಸರ ತನಿಖೆಯಿಂದ ಘಟನೆಗೆ ನಿಜವಾದ ಕಾರಣ ತಿಳಿದು ಬರಬೇಕಾಗಿದೆ.

Intro:AnchorBody:ಅನಾರೋಗ್ಯ ಹಾಗೂ ಅಪಘಾತ ಆದ ಸಮಯದಲ್ಲಿ ರಕ್ತದ ಅಗತ್ಯ ಇರುತ್ತದೆ.ರಕ್ತವನ್ನು ಬೇಕಾದರೆ ರೋಗಿಗಳು ಪರದಾಡುವಂತಹ ಸ್ಥಿತಿ ಇದೆ.ಆದರೆ ಇಂತಹ ರಕ್ತದ ಪಾಕೀಟು ರಸ್ತೆ ಬದಿಯಲ್ಲಿ ಎಸೆದಿರುವದು ಬಾಗಲಕೋಟೆ ನಗರದಲ್ಲಿ ‌ಬೆಳಕಿಗೆ ಬಂದಿದೆ.
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದ ಸಮೀಪ ಬಸ್ ನಿಲ್ದಾಣ ‌ಕ್ಕೆ ಅಡ್ಡ ರಸ್ತೆಯಲ್ಲಿ ಹಾಯ್ದು ಹೋಗುವಾಗ ಬಂದ್ ಆಗಿರುವ ಅಂಗಡಿ ಮುಂದೆ ಬೇಕಾಬಿಟ್ಟಿ ಆಗಿ ಎಸೆಯಲಾಗಿದೆ.
ಅಕ್ಕಪಕ್ಕ ಆಸ್ಪತ್ರೆ ಇಲ್ಲವಾದರೂ ಇಂತಹ ಸ್ಥಳದಲ್ಲಿ ಎಸೆದಿರುವದು ಚರ್ಚೆಗೆ ಗ್ರಾಸವಾಗಿದೆ. ರಕ್ತ ಬೇಕಾದರೆ ಎಷ್ಟೇ ದುಡ್ಡು ಕೊಟ್ಟರು ಸಿಗಲ್ಲ,ಇನ್ನೊಬ್ಬರ ರಕ್ತ ದಾನ ಮಾಡಿದರೆ,ಬ್ಲಡ್‌ ಬ್ಯಾಂಕನಲ್ಲಿ ರಕ್ತ ನೀಡುತ್ತಾರೆ.ಆದರೆ ಇಲ್ಲಿ ಎಸೆದು ಹೋಗಿರುವ ಬಗ್ಗೆ ಸಂಶಯ ಮೂಡಿಸಿದೆ.
ರೋಗಿಗಳಿಗೆ ಉಪಯೋಗ ಇಲ್ಲವೆಂದು ಎಸೆದು ಹೋಗಲಾಗಿದೆಯೇ,ಅಥವಾ ಬೇರೆಯವರಿಗೆ ಉಪಯೋಗ ಆಗಬಾರದು ಎಂದು ಎಸೆಯಲಾಗಿದೆ ಎಂಬುದೇ ಪ್ರಶ್ನೆ ಆಗಿದೆ.ಈ ಬಗ್ಗೆ ತನಿಖೆ ನಡೆಸಬೇಕಾಗಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Jul 4, 2019, 10:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.