ಬಾಗಲಕೋಟೆ: ಬೈಕ್ ಮತ್ತು ಕಾರು ಸೇರಿದಂತೆ ಇತರ ವಾಹನಗಳ ಸಂಖ್ಯಾ ಫಲಕದ ಮೇಲೆ ಫ್ಯಾಷನ್ ಚಿತ್ರ ಮತ್ತು ಯಾವುದೇ ರೀತಿಯ ಸಿನಿಮಾ ಹೆಸರು ಕಂಡು ಬಂದಲ್ಲಿ ನಗರದ ಪೊಲೀಸರು ಕಿತ್ತು ಹಾಕುತ್ತಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಾಗಲಕೋಟೆ, ಬಾದಾಮಿ ಹಾಗೂ ಇಳಕಲ್ಲ ಪಟ್ಟಣದಲ್ಲಿ ಜಾಗೃತಿ ಮೂಡಿಸುತ್ತಿದ್ದು, ವಾಹನ ಸವಾರರು ನಿರ್ಲಕ್ಷ್ಯ ಮಾಡಿದ್ದಲ್ಲಿ ಮುಂದೆ ದಂಡ ಕಟ್ಟಲು ಸಜ್ಜಾಗಬೇಕು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಿಂದ ಹೆದರಿದ್ದ ವಾಹನ ಸವಾರರು ಸದ್ಯ ಪೊಲೀಸರ ನೂತನ ನಿಯಮದಿಂದ ಕಂಗಾಲಾಗಿದ್ದಾರೆ. ಒಟ್ಟಾರೆ ಪೊಲೀಸರು ಹಿಡಿದು ದಂಡ ಹಾಕುವ ಮುಂಚೆ ಸವಾರರು ಎಚ್ಚೆತ್ತುಕೊಳ್ಳಬೇಕಿದೆ.