ಬಾಗಲಕೋಟೆ : ರಾಮ ಮಂದಿರ ನಿರ್ಮಾಣ ಜಾಗ ವಿವಾದಿತ, ನಾನು ದೇಣಿಗೆ ಕೊಡಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೆ, ಬಾದಾಮಿ ಪುರಸಭೆ ಸದಸ್ಯ ಬಸವರಾಜ ಗೋರಕೊಪ್ಪನವರ ಎಂಬುವರು ಸಿದ್ದರಾಮಯ್ಯನವರಿಗೆ ಟ್ವೀಟ್ ಮೂಲಕ ಸವಾಲು ಎಸೆದಿರುವುದು ಚರ್ಚೆಯ ವಿಷಯವಾಗಿದೆ.
ಓದಿ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಚಾಲನೆ
1 ಎಕರೆ ಜಮೀನು ಜಾಗ ಉಚಿತ ದೇಣಿಗೆ ಕೊಡುತ್ತೇನೆ, ಸಿದ್ದರಾಮಯ್ಯನವರು ರಾಮ ಮಂದಿರ ಕಟ್ಟಿಸಲಿ ಎಂದು ಸವಾಲು ಹಾಕಿದ್ದಾರೆ. ಬಾದಾಮಿ ಬಳಿಯ ಬನಶಂಕರಿ ರಸ್ತೆಯಲ್ಲಿರುವ 10 ಎಕರೆ ಜಮೀನು ಪೈಕಿ 1 ಎಕರೆ ಜಮೀನು ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

₹80 ಲಕ್ಷ ಬೆಲೆಬಾಳುವ 1 ಎಕರೆ ಜಮೀನು ಕೊಡುತ್ತೇನೆ. ರಾಮಮಂದಿರ ಕಟ್ಟಿ ತೋರಿಸಿ ಎಂದು ನೇರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ. ತಾಯಿ ಬನಶಂಕರಿ ದೇವಿ ಮೇಲೆ ಆಣೆ ಮಾಡಿ 1 ಎಕರೆ ಕೊಡುತ್ತೇನೆ. ವಿವಾದಿತ ಶ್ರೀರಾಮ ಜನ್ಮ ಭೂಮಿಗೆ ದೇಣಿಗೆ ಕೊಡಲ್ಲ, ಬೇರೆ ಕೊಡುತ್ತೇನೆ ಎಂದಿದ್ದ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬಳಿಕವೂ ರಾಮ ಜನ್ಮ ಭೂಮಿ ವಿವಾದಿತ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ನೋವಾಗಿದೆ. ನನ್ನ ಸವಾಲು ಸ್ವೀಕರಿಸಿ ಉಚಿತ ಕೊಟ್ಟ ಜಮೀನಿನಲ್ಲಿ ಸಿದ್ದರಾಮಯ್ಯ ಸ್ವಂತ ಹಣದಲ್ಲಿ ಶ್ರೀರಾಮ ಮಂದಿರ ಕಟ್ಟಲಿ.
1ಎ ಕರೆ ಜಮೀನು ಹಕ್ಕು ಬಿಟ್ಟು ಕೊಡುತ್ತೇನೆ ಎಂದು ಬಸವರಾಜ ಗೋರಕೊಪ್ಪನವರ ಸವಾಲು ಹಾಕಿದ್ದಾರೆ. ಇದು ಈಗ ಬಾದಾಮಿ ಮತಕ್ಷೇತ್ರ ಸೇರಿದಂತೆ ರಾಜ್ಯ ರಾಜಕೀಯದಲ್ಲಿಯೂ ಚರ್ಚೆಗೆ ಗ್ರಾಸ ಉಂಟು ಮಾಡಿದೆ. ಈ ಬಗ್ಗೆ ಸಿದ್ದರಾಮಯ್ಯನವರು ಪ್ರತಿಕ್ರಿಯೆ ಏನಾಗಲಿದೆ ಎಂದು ಕುತೂಹಲ ಮೂಡಿಸಿದೆ.