ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಹೋತ್ಸವವು ಇದೇ ಜನವರಿ 10 ರಂದು ನಡೆಯಲಿದೆ.
ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಹಗಲು-ರಾತ್ರಿ ನಡೆಯುವ ಏಕೈಕ ಮನರಂಜನೆ ಜಾತ್ರೆ ಇದಾಗಿದ್ದು, ಎಲ್ಲಾ ಬಗೆಯ ಸಾಮಗ್ರಿಗಳು ದೊರಕುವುದು ಜಾತ್ರೆಯ ವಿಶೇಷವಾಗಿದೆ. ಜಾತ್ರೆಯ ಮುಂಚೆಯೇ ನಾಟಕ ಕಂಪನಿಗಳು ಯಾವುವು, ಅದರಲ್ಲಿ ಯಾವ ನಾಟಕಗಳ ಪ್ರದರ್ಶನ ಇದೆ ಎಂಬುದು ಕುತೂಹಲಕಾರಿ ಆಗಿರುತ್ತದೆ.
ಈ ಬಾರಿ ಎಂಟು ನಾಟಕ ಕಂಪನಿಗಳು ಇದ್ದು, ಅವುಗಳ ಹೆಸರು ಇಂತಿದೆ. ಸಿದ್ದರಾಮಯ್ಯನವರ ಭಾಷಣದಲ್ಲಿ ಪುಲ್ ವೈರಲ್ ಆಗಿರುವ ಹೌದ ಹುಲಿಯಾ ಎಂಬುದನ್ನೆ ನಾಟಕಕ್ಕೆ ಹೆಸರು ಇಡಲಾಗಿದೆ. ಬದಾಮಿ ಮತಕ್ಷೇತ್ರದ ಶಾಸಕರು ಆಗಿರುವ ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಹೌದ ಹುಲಿಯಾ ನಾಟಕ ಈ ಬಾರಿ ಹೆಚ್ಚು ಗಮನ ಸೆಳೆದಿದೆ. ಇದರ ಜೊತೆಗೆ, ಗೌರಿ ಹೋದಳು ಗಂಗೆ ಬಂದಳು, ನಿಶೆ ಏರಿಶ್ಯಾಳ ನವರಂಗಿ, ಹೌದಲೇನ ರಂಗಿ ಉದಲೇನ ಪುಂಗಿ, ಪೌರಾಣಿಕ ನಾಟಕ, ಬಂದರ ಬಾರಾ ಬಸಣ್ಣಿ, ಮನಸ್ಯಾಕ ಕೊಟ್ಟಿ ಕೈಯರ ಬಿಟ್ಟಿ, ಸಿಂಪಲ್ ಹುಡುಗ ಡಿಂಪಲ್ ಹುಡುಗಿ ಎಂಬ ನಾಟಕಗಳ ಪ್ರದರ್ಶನ ನಡೆಯಲಿದೆ. ಜನವರಿ 9 ರಂದು ಪ್ರತಿ ಮೂರು ಪ್ರದರ್ಶನಗಳು ನಡೆಯಲಿದೆ.
ಸಂಜೆ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಈ ಬನಶಂಕರಿ ದೇವಾಲಯ ಜಾತ್ರೆಯನ್ನು ನೋಡಲು ಬರುವುದು ವಿಶೇಷವಾಗಿದೆ.