ETV Bharat / state

ಅಧಿಕಾರಿಗಳ ದಾಳಿ: ಕೃಷಿ ಪರಿಕರ ಮಾರಾಟ ಮಾಡುವ 64 ಮಳಿಗೆಗಳಿಗೆ ನೋಟಿಸ್​​​​​​​ - Attack on farm accessory stores

ಬಾಗಲಕೋಟೆಯಲ್ಲಿ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ 10 ತಂಡಗಳು ಜಿಲ್ಲೆಯಾದ್ಯಂತ 90 ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದವು.

Attack on farm accessory stores
ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ದಾಳಿ
author img

By

Published : May 16, 2020, 4:12 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಶಯಾಸ್ಪದ ರಸಗೊಬ್ಬರ ಮಾರಾಟ ಜಾಲ ಪತ್ತೆಗಾಗಿ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ 10 ತಂಡಗಳು ಜಿಲ್ಲೆಯಾದ್ಯಂತ 90 ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದವು.

42 ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಪರಿವೀಕ್ಷಕರು ಮತ್ತು ಜಾಗೃತ ದಳದ 3 ಜಾಗೃತ ಕೋಶದ ಅಧಿಕಾರಿಗಳನ್ನು ಒಳಗೊಂಡ 10 ತಂಡಗಳನ್ನು ರಚಿಸಿ, ಜಿಲ್ಲೆಯಾದ್ಯಂತ ಅಂದಾಜು 90 ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಒಂದೇ ಬಾರಿ ದಾಳಿ ಮಾಡಲಾಯಿತು. ಪರಿಶೀಲನೆ ವೇಳೆ ನ್ಯೂನತೆ ಹಾಗೂ ಕಾನೂನು ಉಲ್ಲಂಘನೆ ಮಾಡಿದ 64 ಮಳಿಗೆಗಳ ಮೇಲೆ ಕಾರಣ ಕೇಳಿ ನೋಟಿಸ್‍ಗಳನ್ನು ನೀಡಲಾಯಿತು.

ನ್ಯೂನತೆಗಳನ್ನು ತಿದ್ದಿಕೊಳ್ಳಲು ಸಮಯ ನೀಡಿ ಮತ್ತು ಕಾನೂನು ಉಲ್ಲಂಘನೆ ಮುಂದುವರೆದರೆ ಪರಿಕರ ಮಾರಾಟ ಪರಿವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಎಲ್ಲಾ ಪರಿಕರಗಳ ಗರಿಷ್ಠ ಮಾರಾಟ ಬೆಲೆಯನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು. ಕಡ್ಡಾಯವಾಗಿ ಪರಿಕರಗಳ ವಹಿವಾಟದ ರಸೀದಿಯನ್ನು ರೈತರಿಗೆ ನೀಡಬೇಕು ಎಂದು ಎಚ್ಚರಿಸಿದರು.

ಪರವಾನಗಿ ಇಲ್ಲದೇ ಅಕ್ರಮವಾಗಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ದಾಸ್ತಾನು ಮತ್ತು ಮಾರಾಟ ಮಾಡುವುದು ಹಾಗೂ ಪರವಾನಗಿ ಇದ್ದರೂ ಸಂಸ್ಥೆಗಳ ಮೂಲ ಪ್ರಮಾಣ ಪತ್ರಗಳನ್ನು ಹೊಂದಿಲ್ಲದ ಪರಿಕರಗಳನ್ನು ಮಾರುವುದು ಅಪರಾಧವಾಗಿದ್ದು, ಅಂತಹವರ ವಿರುದ್ಧ ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ ಕಾಯ್ದೆ, ಕೀಟನಾಶಕ ಕಾಯ್ದೆ ಮತ್ತು ಅವಶ್ಯಕ ವಸ್ತುಗಳ ಕಾಯ್ದೆಯಡಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಂಟಿ ಕೃಷಿ ನಿರ್ದೇಶಕಿ ಡಾ. ಚೇತನಾ ಪಾಟೀಲ ಹಾಗೂ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಡಾ. ಎಸ್.ಎಸ್.ಪಾಟೀಲ ನೇತೃತ್ವದ ತಂಡದಲ್ಲಿ ಜಿಲ್ಲೆಯ ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.