ETV Bharat / state

ಬಾಗಲಕೋಟೆಯಲ್ಲಿ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30ನೇ ವಾರ್ಷಿಕೋತ್ಸವ - ಶಿವಾನುಭವ ಕಲ್ಯಾಣ ಮಂಟಪ

ಬಾಗಲಕೋಟೆಯಲ್ಲಿ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30ನೇ ವಾರ್ಷಿಕೋತ್ಸವ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಬಾಗಲಕೋಟೆಯಲ್ಲಿ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30ನೇ ವಾರ್ಷಿಕೋತ್ಸವ
author img

By

Published : Jul 28, 2019, 4:16 AM IST

ಬಾಗಲಕೋಟೆ: ಶಿಲ್ಪಕಲೆ, ಚಿತ್ರಕಲೆ, ಬಡಿಗತನ, ಪತ್ತಾರಿಕೆಯು ವಿಶ್ವಕರ್ಮರ ಕಲೆಗಳಾಗಿದ್ದು, ಅವುಗಳಲ್ಲಿರುವ ಅಪಾರ ಜ್ಞಾನ ಯಾವ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಹಾಗಾಗಿ ಈ ವಿಶ್ವಕರ್ಮರ ಪಾರಂಪರಿಕ ಸಂಸ್ಕೃತಿ ಉಳಿಯಬೇಕಾಗಿದೆ ಎಂದು ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಅವರು ಇಲ್ಲಿನ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಬಾಗಲಕೋಟೆ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.

ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ವಿಜೇತರಾದ ದ್ಯಾಮಣ್ಣ ಬಡಿಗೇರ, ಲೋಹ ಶಿಲ್ಪಿ ಮೌನೇಶ್​ ಬಡಿಗೇರ, ಶಿಲ್ಪಿ ಕಲಾವಿದರಾದ ಮೋಹನ್​ ನಿರುಪಾದಿ ಬಡಿಗೇರ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಹಾಗೂ ಶಾಸಕ ಡಾ.ವಿರಣ್ಣ ಚರಂತಿಮಠ ಅವರನ್ನು ಸನ್ಮಾನಿಸಲಾಯಿತು. ಬಳಿಕ ರವಿ ಬಡಿಗೇರ ಅವರ ಸಂಪಾದಿಕೆಯಲ್ಲಿ ಬಂದ ಬಾಗಲಕೋಟೆ ಸೇವಕ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

Intro:AnchorBody:ವಿಶ್ವಕರ್ಮರ ಪಾರಂಪರಿಕ ಸಂಸ್ಕøತಿ ಉಳಿಯಬೇಕಾಗಿದೆ

ಬಾಗಲಕೋಟೆ: ಶಿಲ್ಪಕಲೆ.ಚಿತ್ರಕಲೆ, ಬಡಿಗತನ,ಪತ್ತಾರಿಕೆಯು ವಿಶ್ವಕರ್ಮರ ಕಲೆಗಳಲ್ಲಿನ ಅಪಾರ ಜ್ಷಾನ ಯಾವ ವಿಶ್ವವಿದ್ಯಾಲಯಗಳಲ್ಲಿ ಇಲ್ಲಾ ಆಗಾಗಿ ಈ ವಿಶ್ವಕರ್ಮರ ಪಾರಂಪರಿಕ ಸಂಸ್ಕøತಿ ಉಳಿಯಬೇಕಾಗಿದೆ ಎಂದು ಬಾಗಲಕೋಟೆ ಶಾಸಕರಾದ ಡಾ: ವಿರಣ್ಣ ಚರಮತಿಮಠ ಹೇಳಿದರು.
ಅವರು ಬಾಗಲಕೋಟೆ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಬಾಗಲಕೋಟೆ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30 ನೇ ವಾರ್ಷಕೋತ್ಸವ,ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ವಿಶ್ವಕರ್ಮರ ಪಾರಂಪರಿಕ ಸಂಸ್ಕøತಿಯಲ್ಲಿ ಬರುವ ಮೂಲ ಪಂಚಕಸುಬಗಳನ್ನು ಯಾವ ಶಾಲೆಗಳಲ್ಲಿಯೂ ಕಲಿಸಿಕೊಡುವುದಿಲ್ಲಾ ಈಗಾಗಿ ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಉದ್ಯಗಳನ್ನು ಹೇಚ್ಚಾಗಿ ಮಾಡಿ,ತಾವು ಎಷ್ಟೆ ವಿದ್ಯಾವಂತರಾದರೂ ಕೂಡಾ ಅವುಗಳನ್ನು ಮರೆಯದಿರಿ, ಇಂದು ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿ ಅವರು ಸ್ಕೀಲ್ ಇಂಡಿಯಾ.ಮೇಕ್ ಇನ್ ಇಂಡಿಯಾ,ಸ್ಟಾಂಡ್ ಆಪ್ ಇಂಡಿಯಾ ಎಂಬ ಯೋಜನೆಗಳ ಮೂಲಕ ನಮ್ಮಲ್ಲಿ ಜ್ಞಾನ ಇಲ್ಲಿಯೆ ಬಳಿಕೆಯಾಗಿ ಇಲ್ಲಿಯೆ ಬೇಳಸುವ ಉದ್ದೇಶವಾಗಿದೆ ಎಂದರು.
ಇನ್ನೂರ್ವ ಅತಿಥಿಗಳಾಗಿ ಬಾಗವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಜಗದೇವ ಮರೋಳ ಹಾಗೂ ವಿ,ಎನ್, ಕಮ್ಮಾರ ಅವರು ಮಾತನಾಡಿ ಪ್ರತಿಭೆಗಳನ್ನು ಸಾಧಕರನ್ನು ಗುರುತಿಸಿ ಸತ್ಕರಿಸುವುದ ಬಹುದೊಡ್ಡ ಮಹಾಕಾರ್ಯವಾಗಿದೆ ಎಂದರು,
ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿದ ಮುರನಾಳ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಮಠ ಹಿರಿಯ ಪೂಜ್ಯರಾದ ಮಳಿಯಪ್ಪಯ್ಯಮಹಾಸ್ವಾಮಿಗಳು ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಾನವನ ಜೀವನ ಪರಿಪೂರ್ಣವಾಗಲೂ ಆತನಿಗೆ ಬಾಲ್ಯದಲ್ಲಿಯೆ ಉತ್ತಮ ಸಂಸ್ಕಾರ ನಿಡುವುದು ಅಗತ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕøತಿ ಗೆ ಮಾರುಹೋಗದೆ ಭಾರತಿಯ ಸಂಸ್ಕøತಿಯನ್ನಯನ್ನು ಉಳಿಸುವ ಮಹತ್ವಕಾರ್ಯವಾಗಬೇಕಿದೆ ಎಂದರು.
ಕಾರ್ಯಕ್ರಮದ ವೆಧಿಕೆಮೆಲೆ ಇನ್ನೋರ್ವ ಶ್ರೀಗಳಾದ ಜಗನ್ನಾಥಮಹಾಸ್ವಾಮಿಗಳು.ವಿಶ್ವಕರ್ಮ ವಿಧ್ಯಾವಿಕಾಸ ಸಂಸ್ಥೆ ಅಧ್ಯಕ್ಷರಾದ ಈರಣ್ಣ ಪತ್ತಾರ ಬೇವೂರ. ನಾರಾಯಣ ಸೋನಾರ,ಸಮಾಜದ ನಗರ ಅಧ್ಯಕ್ಷರಾದ ನಾಗೇಶ ಬರಗಿ, ಪ್ರದಾನ ಕಾರ್ಯದರ್ಶಿಗಳಾದ ಜಗನ್ನಾಥ ಪತ್ತಾರ, ಕಾರ್ಯದರ್ಶಿಗಳಾದ ಸಂಗಣ್ಣ ಹಡಗಲಿ, ಪಂಚಕಮೀಟಿಯ ವಿ.ವಿ ಐಹೋಳೆ. ಸುರೇಂದ್ರ ಪತ್ತಾರ.ರಮೇಶ ಪತ್ತಾರ,ಪ್ರಶಾಂತ ಪತ್ತಾರ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸನ್ಮಾನ : ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ವಿಜೇತರಾದ ದ್ಯಾಮಣ್ಣ ಬಡಿಗೇರ, ಲೋಹ ಶಿಲ್ಪಿ ಮೌನೇಶ ಬಡಿಗೇರ. ಶಿಲ್ಪಿಕಲಾವಿದರಾದ ಮೋಹನ ನಿರುಪಾದಿ ಬಡಿಗೇರ ಇವರುಗಳನ್ನು ಸಂಸ್ಥೆವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು .ಇದೆ ಸಂಧರ್ಭದಲ್ಲಿ ಎಸ್,ಎಸ್,ಎಲ್ ಸಿ,ಹಾಗೂ ಪಿಯೂಸಿಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಹಾಗೂ ಶಾಸಕ ಡಾ.ವಿರಣ್ಣ ಚರಂತಿಮಠ ಅವರಿಗೆ ಸನ್ಮಾನಿಸಲಾಯಿತು.ಹಾಗೂ ರವಿ ಬಡಿಗೇರ ಅವರ ಸಂಪಾದಿಕೆಯಲ್ಲಿ ಬಂದ ಬಾಗಲಕೋಟೆ ಸೇವಕ ಮಾಸಿಕ ಪತ್ರಿಕೆಯನ್ನು ಬಿಡುಗಡೆಮಾಡಲಾಯತು.

ಸಂಸ್ಥೆಯ ಅದ್ಯಕ್ಷರಾದ ಈರಣ್ಣ ಆರ್ ಪತ್ತಾರ ಬೇವೂರ ಸ್ವಾಗತಿಸಿದರೆ. ಗಣೇಶ ನಾರಯಣ.ಹಾಗೂ ಬಾಸ್ಕರ ಪತ್ತಾರ ಸಂಗಡಗರಿಂದ ಪ್ರಾರ್ಥಿಸಲಾಯಿತು.ಮೌನೇಶ ಪತ್ತಾರ ಕಿಡದೂರ ವಾರ್ಷಿಕವರದಿ ಒಪ್ಪಿಸಿದರು,ಮನೋಹರ ಪತ್ತಾರ.ಜಗನ್ನಾಥ ಪತ್ತಾರ ಕಾರ್ಯಕ್ರಮ ನಿರುಪಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಗಣ್ಯರು ಸೇರಿದಂತೆ ಅನೇಕರು ಬಾಗವಹಿಸದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.