ETV Bharat / state

ಭ್ರೂಣ ಪತ್ತೆ ಕೇಂದ್ರದ ಮೇಲೆ ದಾಳಿ : ಯಂತ್ರೋಪಕರಣ ವಶ, ಹಿಗ್ಗಾಮುಗ್ಗಾ ತರಾಟೆ

ಆರೋಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲದೇ ಸ್ಕಾನಿಂಗ್ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಶಿವಾ ಪೊಲಿ ಕ್ಲಿನಿಕ್ ಎಂಬ ಹೆಸರಿನ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ

author img

By

Published : Feb 29, 2020, 11:07 PM IST

an-attack-on-the-fetal-center-in-bagalkot
ಭ್ರೂಣ ಪತ್ತೆ ಕೇಂದ್ರದ ಮೇಲೆ ದಾಳಿ

ಬಾಗಲಕೋಟೆ : ಅನಧಿಕೃತ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಕೇಂದ್ರದ ಮೇಲೆ ಜಿ.ಪಂ.ಸಿಇಒ ಗಂಗೂಬಾಯಿ ಮಾನಕರ್ ಹಾಗೂ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿ ಡಾ.ಅನಿಲ್​ ದೇಸಾಯಿ ದಾಳಿ ಮಾಡಿ, ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿರುವ ಘಟನೆ ಬೀಳಗಿ ಪಟ್ಟಣದಲ್ಲಿ ನಡೆದಿದೆ.

ಆರೋಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲದೇ ಸ್ಕಾನಿಂಗ್ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಶಿವಾ ಕ್ಲಿನಿಕ್ ಎಂಬ ಹೆಸರಿನ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಡಾ ಮೋಹನ್ ಚೆಟ್ಟರ ಎಂಬುವವರು ಬಿಎಎಮ್​ಎಸ್​ ಅಧ್ಯಯನ ಮುಗಿಸಿ, ಗಭೀರ್ಣಿಯರಿಗೆ ಸ್ಕಾನಿಂಗ್ ಮಾಡುತ್ತಿದ್ದರು. ಹೆಚ್ಚಿನ ಹಣ ತೆಗೆದುಕೊಂಡು ಲಿಂಗ ಪತ್ತೆ ಮಾಡಿ ಮಾಹಿತಿ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ.

ಭ್ರೂಣ ಪತ್ತೆ ಕೇಂದ್ರದ ಮೇಲೆ ದಾಳಿ

ಎಂಬಿಬಿಎಸ್ ಮಹಿಳಾ ವೈದ್ಯರು ಹಾಗೂ ರೆಡಿಯೋಲೋಜಿಸ್ಟ್​ ಇದ್ದರೆ ಮಾತ್ರ ಸ್ಕಾನಿಂಗ್ ಮಾಡುವವರಿಗೆ ಆರೋಗ್ಯ ಇಲಾಖೆ ವತಿಯಿಂದ ಪರವಾನಗಿ ನೀಡಲಾಗುತ್ತದೆ. ಆದರೆ ಸರ್ಕಾರದ ಆದೇಶದಂತೆ ಲಿಂಗಪತ್ತೆ ಮಾಡುವುದು ಅಪರಾಧ. ಆದರೆ, ಇಲ್ಲಿ ಮಾತ್ರ ಲಿಂಗ ಪತ್ತೆ ಮಾಡುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಈ ಬಗ್ಗೆ ‌ಜಿ.ಪಂ ಸಿಇಒ ಗಂಗೂಬಾಯಿ ಸಿಬ್ಬಂದಿಗೆ ಹಾಗೂ ವೈದ್ಯರನ್ನ ತರಾಟೆಗೆ ತೆಗೆದುಕೊಂಡರು. ನಂತರ ಡಿಎಚ್​ಒ ಡಾ. ಅನಿಲ್​ ದೇಸಾಯಿ ಅವರು ಯಂತ್ರೋಪಕರಣಗಳು ವಶಕ್ಕೆ ಪಡೆದುಕೊಂಡು, ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.