ಬಾಗಲಕೋಟೆ: ಬಾದಾಮಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ, ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
2018-19 ನೇ ಸಾಲಿನಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಕೊಳ್ಳಲಾದ ಕಾಮಗಾರಿಗಳಿಗೆ ಸರಬರಾಜು ಮಾಡಿದ ಕಚ್ಚಾವಸ್ತುಗಳಿಗೆ ಸಂಬಂಧಿಸಿದಂತೆ ವೋಚರ್ ಮತ್ತು ಅಳತೆ ಪುಸ್ತಕಗಳನ್ನು ಬರೆದು ಮಂಜೂರಿ ಕುರಿತು ವಿಭಾಗ ಕಚೇರಿಗೆ ಕಳುಹಿಸಲು ಎಇಇ .ಕೆ.ಡಿ ಕರಮಳ್ಳಿ 60 ಸಾವಿರ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದರಲ್ಲಿ ಮೊದಲು ಹಂತವಾಗಿ 30 ಸಾವಿರ ಹಣ ನೀಡಲಾಗಿತ್ತು.ಮತ್ತೆ 30 ಸಾವಿರ ಹಣವನ್ನು ನೀಡುವ ಸಮಯದಲ್ಲಿ ಎಸಿಬಿ ಪೊಲೀಸ್ ಸಿಬ್ಬಂದಿ ದಾಳಿ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಹಾಗೂ ಇಂಜಿನಿಯರಿಂಗ್ .ಕೆ.ಡಿ ಕರಮಳ್ಳಿ ಅವರ ಮೇಲೆ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಬಸವರಾಜ್ ಸಂಗಪ್ಪ ಪಾತ್ರೋಟಿ ಎಂಬುವವರು ನೀಡಿದ ದೂರಿನ ಹಿನ್ನಲೆ,ಎಸಿಬಿ ಡಿಎಸ್ ಪಿ ಜಿ.ವಾಯ್ ಗುಡಾಜಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.