ETV Bharat / state

ಕಾರ್ಯಕರ್ತರು ಒಳ್ಳೆಯ ನಡತೆ ಅನುಸರಿಸಬೇಕು: ಶಾಸಕ ವೀರಣ್ಣ ಚರಂತಿಮಠ

ಕಾರ್ಯಕರ್ತರು ಅಧಿಕಾರಕ್ಕೆ ಆಸೆಪಡಬಾರದು. ನಿಷ್ಠಾವಂತ ಕಾರ್ಯಕರ್ತರು ಇದ್ದಲ್ಲಿ ಅಧಿಕಾರ ಸಿಗಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

MLA Veeranna Charanmatiha
ಶಾಸಕ ವೀರಣ್ಣ ಚರಂತಿಮಠ
author img

By

Published : Oct 10, 2020, 5:08 PM IST

ಬಾಗಲಕೋಟೆ: ಅಧಿಕಾರ ಅಂದರೆ ದೆವ್ವ ಇದ್ದಂತೆ. ಅದರಿಂದ ಒಳ್ಳೆಯದನ್ನೂ ಮಾಡಬಹುದು, ಕೆಟ್ಟದ್ದೂ ಮಾಡಬಹುದು. ಆದರೆ, ಕಾರ್ಯಕರ್ತರು ಒಳ್ಳೆಯ ನಡತೆ ಅನುಸರಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಸಲಹೆ ಕೊಟ್ಟರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು

ನಗರದಲ್ಲಿ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಿಕೆಪಿಎಸ್‌ನಿಂದ ಹಿಡಿದು, ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಪಕ್ಷ ಆಡಳಿತದಲ್ಲಿದೆ. ಆದರೆ, ಅಧಿಕಾರದಿಂದ ಕೆಟ್ಟ ಪಕ್ಷದವರು ಏನು ಮಾಡಿದರು ಎಂಬ ಮಾಹಿತಿಯೂ ನಮ್ಮ ಬಳಿ ಇದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ‌ ಕುಟುಕಿದರು.

ನಂತರ ಮಾತನಾಡುತ್ತಾ, ಎಲ್ಲರಿಗೂ ಅಧಿಕಾರ ನೀಡಿ ಸಮಾಧಾನಪಡಿಸುವುದು ಸಾಧ್ಯವಿಲ್ಲ. ದೇವರು ಬಂದರೂ ಕೂಡ ಎಲ್ಲರಿಗೂ ಸಮಾಧಾನ ಮಾಡಲು ಆಗದೆ, ತಲೆಕೆಟ್ಟು ವಾಪಸ್ ಹೋಗುತ್ತಾರೆ. ಹೀಗಾಗಿ, ಕಾರ್ಯಕರ್ತರು ಅಧಿಕಾರಕ್ಕೆ ಆಸೆ ಪಡಬಾರದು. ನಿಷ್ಠಾವಂತ ಕಾರ್ಯಕರ್ತರು ಇದ್ದಲ್ಲಿ ಅಧಿಕಾರ ಸಿಗಲಿದೆ. ನಗರಸಭೆಯಲ್ಲಿ ಸುಮಾರು 15 ವರ್ಷಗಳ ಕಾಲ ಬಿಜೆಪಿ ಪಕ್ಷದ ಆಡಳಿತ ಇದೆ. ಈ ಹಿಂದೆ ಬೇರೆ ಸರ್ಕಾರ ಆಡಳಿತ ಇದ್ದ ಸಮಯದಲ್ಲಿ ನಗರಸಭೆ ಸದಸ್ಯರಿಗೆ ಯಾವ ರೀತಿ ತೊಂದರೆ ಆಗಿದೆ ಎಂಬುದು ‌ತಿಳಿದಿದೆ ಎಂದರು.

ಮುಂದುವರೆದು ಮಾತನಾಡಿದ ಅವರು, ಪ್ರಾಧಿಕಾರ ಸದಸ್ಯರ ನೇಮಕ, ವಾರ್ಡ್​ ಅಧ್ಯಕ್ಷರ ನೇಮಕ‌ ಸೇರಿದಂತೆ ಎಲ್ಲಾ ಬಗೆಯ ನೇಮಕ ಕಾರ್ಯ ನಡೆದಿದೆ. ಆದರೆ, ಕಾರ್ಯಕರ್ತರು ಮಾತ್ರ ಒಳ್ಳೆಯ ನಡೆಯನ್ನು ಹೊಂದಿ ಜನತೆಗೆ ಸೌಲಭ್ಯಗಳನ್ನು ಸಿಗುವಂತೆ ಮಾಡುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಕರೆ‌ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ನಾರಾಯಣ ಸಾ ಭಾಂಡೆಗೆ ಸೇರಿದಂತೆ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.