ETV Bharat / state

ಅಡಿಟ್ ಆಫೀಸರ್ ಹೆಸರಿನಲ್ಲಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿ ಅರೆಸ್ಟ್​ - cheating case accused arrest news

ಕಳೆದ ವರ್ಷ 2020 ರ ಅಗಸ್ಟ್ 30 ರಂದು ವಿದ್ಯಾಗಿರಿಯಲ್ಲಿರುವ ಶ್ರೀನಿಧಿ ಜ್ಯುವೆಲ್ಲರಿ ಅಂಗಡಿಗೆ ಆಡಿಟ್ ಆಫೀಸರ್ ಎಂದು ಹೇಳಿಕೊಂಡು ಹೋಗಿ ಸುಮಾರು10.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

arrest
arrest
author img

By

Published : Mar 1, 2021, 12:05 PM IST

ಬಾಗಲಕೋಟೆ: ಅಡಿಟ್ ಆಫೀಸರ್ ಎಂದುಕೊಂಡು ಜ್ಯುವೆಲ್ಲರಿ ಶಾಪ್​ಗೆ ಹೋಗಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ 2020 ರ ಅಗಸ್ಟ್ 30 ರಂದು ವಿದ್ಯಾಗಿರಿಯಲ್ಲಿರುವ ಶ್ರೀನಿಧಿ ಜ್ಯುವೆಲ್ಲರಿ ಅಂಗಡಿಗೆ ಪ್ರಶಾಂತ ಟಿ.ಎಸ್ ಎಂಬಾತ ತಾನು ಆಡಿಟ್ ಆಫೀಸರ್ ಎಂದು ಹೇಳಿಕೊಂಡು ಸುಮಾರು 218 ಗ್ರಾಂ ತೂಕದ 10.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದನು.

ಈ ಕುರಿತು ಶ್ರೀನಿಧಿ ಜ್ಯುವೆಲ್ಲರಿ ಮಾಲೀಕರಾದ ಸಂತೋಷ ರಾಯ್ಕರ ಎಂಬುವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿ ಪತ್ತೆಗಾಗಿ ಸಕಲೇಶಪುರ, ಬೆಂಗಳೂರು, ಕುಣಿಗಲ್, ರಾಜನುಕುಂಟೆ ಹಾಗೂ ಗೌರಿಬಿದನೂರು ಸೇರಿದಂತೆ ಹಲವೆಡೆ ಪೊಲೀಸರು ಶೋಧ ನಡೆಸಿದ್ದರು. ಕೊನೆಗೆ ಆರೋಪಿ ಹುಬ್ಬಳ್ಳಿಯ ಅಯೋಧ್ಯಾ ಹೊಟೇಲ್​ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಪೊಲೀಸರು ದಾಳಿ ನಡೆಸಿ, ಆರೋಪಿ ಪ್ರಶಾಂತ ಟಿ.ಎಸ್ ಬಂಧಿಸಿದ್ದಾರೆ. ಬಂಧಿತನಿಂದ 218 ಗ್ರಾಂ ಚಿನ್ನಾಭರಣ ಹಾಗೂ 1,800 ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.