ಬಾಗಲಕೋಟೆ: ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸಿಬ್ಬಂದಿವೋರ್ವ ಲಂಚದ ಹಣವನ್ನು ತೆಗೆದುಕೊಂಡು ಹೋಗುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಕಾರು ಸಮೇತ ಲಕ್ಷಾಂತರ ರೂಪಾಯಿಯನ್ನು ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ.
ಮಹಾಂತೇಶ ವಿರುಪಾಕ್ಷ ನಿಡಸೂರ ಎಂಬ ಸಿಬ್ಬಂದಿ ಪರ್ಸೆಂಟೇಜ್ ಆಧಾರದಲ್ಲಿ ಅಕ್ರಮವಾಗಿ ಲಂಚದ ಹಣವನ್ನು ಸಂಗ್ರಹಿಸಿಕೊಂಡು ಕಾರಿನಲ್ಲಿ ಹೋಗಿದ್ದಾರೆ.
ಈ ವೇಳೆ ಬಾಗಲಕೋಟೆ ಎಸಿಬಿ ಅಧಿಕಾರಿ ಸಮೀರ ಮುಲ್ಲಾ ನೇತೃತ್ವದಲ್ಲಿ ದಾಳಿ 5,08,000 ರೂ. ಹಾಗೂ ಪ್ರಯಾಣ ಭತ್ಯೆ ಬಿಲ್ಲುಗಳು, ಇತರ ದಾಖಲೆ ಪತ್ರ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.