ETV Bharat / state

ಬಾಗಲಕೋಟೆ: ಜೈಲಿನಿಂದ ಜಾಮೀನು ಪಡೆದು ಬಂದು ಪತ್ನಿ ಕೊಂದ ಪತಿರಾಯ! - bagalakote crime news

ಪತ್ನಿ ಬೇರೆಯವನ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಪತಿರಾಯ ವ್ಯಕ್ತಿವೋರ್ವನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ. ಈಗ ಜೈಲಿನಿಂದ ಬಿಡುಗಡೆಯಾಗಿ ಬಂದು ತನ್ನ ಪತ್ನಿಯನ್ನು ಕೊಂದಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

A man killed his wife in Bagalkot
ಜೈಲಿನಿಂದ ಜಾಮೀನು ಪಡೆದು ಬಂದು ಹೆಂಡತಿ ಕೊಂದ ಭೂಪ
author img

By

Published : Dec 11, 2020, 9:50 AM IST

Updated : Dec 11, 2020, 10:56 AM IST

ಬಾಗಲಕೋಟೆ: ಪತಿಯೇ ತನ್ನ ಹೆಂಡತಿಯನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಂಗಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಸಾವಿಗೀಡಾದ ಮಹಿಳೆ
ಕೊಲೆಯಾದ ಮಹಿಳೆ

ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ತಲೆ ಮತ್ತು ಮುಖಕ್ಕೆ ಹೊಡೆದ ಪತಿ ಆಕೆಯನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. 48 ವರ್ಷ ವಯಸ್ಸಿನ ಪತ್ನಿಯನ್ನು ಪತಿ ಮಲ್ಲಪ್ಪ ಉಳ್ಳಾಗಡ್ಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಮಹಿಳೆ ಹಾಗೂ ಶ್ರೀಶೈಲ ಎಂಬುವನ ಮಧ್ಯೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗ್ತಿದೆ. ಈ ಕಾರಣಕ್ಕೆ 2017 ರಲ್ಲಿ ಜಗಳ ಮಾಡಿ, ಶ್ರೀಶೈಲ ಎಂಬಾತನಿಗೆ ಹೊಡೆದ ಮಲ್ಲಪ್ಪ ಕೊಲೆ ಯತ್ನ ನಡೆಸಿದ್ದನಂತೆ. ಆಗ ಗಂಡನ ವಿರುದ್ಧವೇ ಹೆಂಡತಿ ಸಾಕ್ಷಿ ಹೇಳಿದ್ದಳು ಎಂದು ತಿಳಿದುಬಂದಿದೆ.

ಜೈಲಿನಿಂದ ಜಾಮೀನು ಪಡೆದು ಬಂದು ಪತ್ನಿ ಕೊಂದ ಪತಿರಾಯ

ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಂದ ಮಲ್ಲಪ್ಪ ಪತ್ನಿ ಕೊಲೆಗೆ ಸಂಚು ಮಾಡಿ ಇವತ್ತು ಕೊಲೆಗೈದು ಪರಾರಿಯಾದ್ದಾನೆ.

Last Updated : Dec 11, 2020, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.