ETV Bharat / state

ಫಲಿಸದ ಪ್ರೀತಿ: ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ; ಬಾಗಲಕೋಟೆಯಲ್ಲಿ ದುರಂತ ಪ್ರೇಮಕಥೆ! - ವಿಷ ಕುಡಿಸಿ ಸಾಯಿಸಿದ ಪ್ರಿಯಕರ

ತಾನು ಪ್ರೀತಿಸಿದ ಹುಡುಗಿ ತನಗೆ ಸಿಗಲು ಸಾಧ್ಯವಿಲ್ಲ ಎಂದು ತಿಳಿದು ಯುವಕನೋರ್ವ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಯುವಕನು ತನ್ನ ಪ್ರೇಯಸಿಗೆ ತಾಳಿ ಕಟ್ಟಿ ನಂತರ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Kumar
ಪ್ರೇಮಿ ಕುಮಾರ್​
author img

By

Published : Jan 1, 2020, 12:15 PM IST

ಬಾಗಲಕೋಟೆ: ತನ್ನ ಪ್ರೇಮಕಹಾನಿ ಸುಖಾಂತ್ಯ ಕಾಣುವುದಿಲ್ಲ ಎಂಬುದನ್ನರಿತ ಯುವಕನೋರ್ವ ಪ್ರೇಯಸಿಗೆ ಅರಿಷಿಣದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ. ಅಲ್ಲದೆ, ತಾನೂ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಲ್ಲಿಕೇರಿ ಗ್ರಾಮದ ಬಳಿ ನಡೆದಿದೆ.

ಎಸ್​.ಪಿ. ಕುಮಾರ ಪಾಟೀಲ್ (20) ಎಂಬಾತ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ಈತ ಹತ್ತನೇ ತರಗತಿ ಓದುತ್ತಿರುವ ತನ್ನ ಪ್ರಿಯತಮೆಗೆ ತಾಳಿ ಕಟ್ಟಿ ಈ ಕೃತ್ಯವೆಸಗಿದ್ದಾನೆ. ಬಾಲಕಿ ಮತ್ತು ಕುಮಾರ ಪಾಟೀಲ್ ಕೆಲ ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರ ಗಮನಕ್ಕೆ ಬಂದಾಗ ಎಚ್ಚರಿಕೆ ನೀಡಿದ್ದರು ಎನ್ನಲಾಗ್ತಿದೆ.

ಬಾಲಕಿಗೆ ತಾಳಿ ಕಟ್ಟಿ ವಿಷ ಕುಡಿಸಿದ ಪ್ರಿಯಕರ

ನಾನು ಪ್ರೀತಿಸಿದ ಪ್ರೇಯಸಿ ಬೇರೆಯವರ ಪಾಲಾಗುತ್ತಾಳೆ ಎಂಬ ಭಯದಿಂದ ಕುಮಾರ್​, ಆಕೆಯನ್ನು ಶಾಲೆಯಿಂದ ಗ್ರಾಮದ ಹೊರಗೆ ಕರೆದೊಯ್ದು ಅರಿಶಿಣದ ತಾಳಿ ಕಟ್ಟಿದ್ದಾನೆ. ನಂತರ ಆಕೆಗೂ ವಿಷ ಕುಡಿಸಿ, ಈತನು ವಿಷ ಕುಡಿದಿದ್ದಾನೆ. ಹುಡುಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಹುಡುಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಗುಳೇದಗುಡ್ಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:AnchorBody:ಬಾಗಲಕೋಟೆ--ಅಪ್ರಾಪ್ತೆ ಹಾಗೂ ಯುವಕನ ಟ್ರ್ಯಾಜಿಡಿ ಲವ್ ಸ್ಟೋರಿ ಇರುವ ಹಿನ್ನೆಲೆ
ಅರಿಷಿಣದ ತಾಳಿ ಕಟ್ಟಿ ವಿಷ ಕುಡಿಸಿ ಯುವಕನಿಂದಲೇ ಅಪ್ರಾಪ್ತೆಯ ಕೊಲೆಗೈದ ಆರೋಪ,ಬಾಗಲಕೋಟೆ ಜಿಲ್ಲೆಯ ಹುಲ್ಲಿಕೇರಿ ಎಸ್ ಪಿ ಗ್ರಾಮದ ಬಳಿ ಘಟನೆ ನಡೆದಿದೆ.
ಗುಳೇದಗುಡ್ಡ ತಾಲ್ಲೂಕಿನ ಹುಲ್ಲಿಕೇರಿ ಎಸ್ ಪಿ..
ಕುಮಾರ ಪಾಟಿಲ್ (೨೦)ಎಂಬ ಯುವಕನಿಂದ ಕೃತ್ಯ ಆರೋಪ.
ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ.ದ್ಯಾಮವ್ವ ಬೂದಿಹಾಳ (೧೬) ಮೃತಪಟ್ಟ ಬಾಲಕಿ.ಹತ್ತನೇ ತರಗತಿ ಓದುತ್ತಿದ್ದ ದ್ಯಾಮವ್ವ.
ಇಬ್ಬರೂ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು..
ನಿನ್ನೆ ದ್ಯಾಮವ್ವ ಶಾಲೆಗೆ ಹೋದಾಗ ಕರೆದೊಯ್ದಿದ್ದ ಯುವಕ,ನಂತರ ಗ್ರಾಮದಲ್ಲಿ ಹೊರವಲಯದಲ್ಲಿ ಅರಿಷಿಣದ ತಾಳಿ ಕಟ್ಟಿ,ಬಳಿಕ ಅಪ್ರಾಪ್ತೆಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಅಪ್ರಾಪ್ತೆಯ ಪೋಷಕರ ಆರೋಪಿಸಿದ್ದಾರೆ.
ಪ್ರೀತಿಗೆ ವಿರೋಧ ಹಿನ್ನೆಲೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೂ ಅಂತಾನೂ ಮಾಹಿತಿ ಇದ್ದು,ಯುವಕ ಗುಳೇದಗುಡ್ಡ ಸರಕಾರಿ ಆಸ್ಪತ್ರೆಗೆ ದಾಖಲಾಗಿ,ಚಿಕಿತ್ಸೆ ಪಡೆಯುತ್ತಿದ್ದಾನೆ.ಬಾಲಕಿ ಮೃತ ಪಟ್ಟಿದ್ದು,ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.