ETV Bharat / state

ಬಾಗಲಕೋಟೆ: ಮರಳಿ ಜಾರ್ಖಂಡ್ ನತ್ತ 22 ವಲಸೆ ಕಾರ್ಮಿಕರು

ಕೆಲಸವನ್ನರಸಿ ಜಿಲ್ಲೆಗೆ ಬಂದು ಲಾಕ್ ಡೌನ್ ಹಿನ್ನಲೆ ಜಿಲ್ಲೆಯಲ್ಲೇ ಉಳಿದಿದ್ದ 22 ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಂಡಿದೆ. ವಲಸೆ ಕಾರ್ಮಿಕರನ್ನು ತಮ್ಮೂರಿನತ್ತ ತೆರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿ, ಅವರನ್ನು ಬೀಳ್ಕೊಟ್ಟಿದೆ.

author img

By

Published : May 31, 2020, 11:04 PM IST

Migrant workers going back to their native

ಬಾಗಲಕೋಟೆ: ಜಾರ್ಖಂಡ್​ನಿಂದ ಜಿಲ್ಲೆಗೆ ಬಂದ 22 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವತಿಯಿಂದಲೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿ, ಶುಭ ಹಾರೈಸಿ ಮರಳಿ ತವರಿ​ನತ್ತ ತೆರಳಲು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.

ಜಿಲ್ಲೆಗೆ ಕೆಲಸಕ್ಕಾಗಿ ಆಗಮಿಸಿದ್ದ 22 ಜನ ವಲಸೆ ಕಾರ್ಮಿಕರನ್ನು ಬಾಗಲಕೋಟೆ ಜಿಲ್ಲಾಡಳಿತ ಖರ್ಚು ಭರಿಸಿ ಬಸ್ ಮೂಲಕ ನಿನ್ನೆ ಕಳುಹಿಸಿಕೊಡಲಾಗಿತ್ತು. ಇಂದು ಬೆಂಗಳೂರಿನಿಂದ ಶ್ರಮಿಕ್ ರೈಲಿನ ಮೂಲಕ ತವರಿಗೆ ಪ್ರಯಾಣ ಬೆಳೆಸಿದರು. ನವನಗರದ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರನ್ನು ವಿಶೇಷ ವೈದ್ಯಕೀಯ ತಪಾಸಣಗೊಳಪಡಿಸಿ, ಪ್ರಮಾಣ ಪತ್ರ ವಿತರಿಸಿ, ಬಳಿಕ ಮಾಸ್ಕ್ ಮುತ್ತು ಸ್ಯಾನಿಟೈಸರ್ ವಿತರಿಸಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.

ಜಿಲ್ಲೆಯಿಂದ ಬೆಂಗಳೂರಿಗೆ ಕಾರ್ಮಿಕರನ್ನು ತಲುಪಿಸುವ ಕಾರ್ಯಕ್ಕೆ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ವೆಂಕಟೇಶ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ನೋಡಲ್ ಅಧಿಕಾರಿಗಳು ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿಕರನ್ನು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಇಂಟರ್​ನ್ಯಾಷನಲ್​ ಎಕ್ಸಿಬಿಷನ್​ ಸೆಂಟರ್​ಗೆ ಬಿಟ್ಟು ಬಂದಿದ್ದರು. ತದನಂತರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಜಾರ್ಖಂಡ್​ನ ವಲಸೆ ಕಾರ್ಮಿಕರನ್ನು ಶ್ರಮಿಕ್ ರೈಲಿನ ಮೂಲಕ ಮರಳಿ ಜಾರ್ಖಂಡ್ ನತ್ತ ಕಳುಹಿಸಿಕೊಡಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಾರ್ಖಂಡ್​ನ ವಲಸೆ ಕಾರ್ಮಿಕರನ್ನು ಕರೆಸಿಕೊಂಡು ಬಂದು ಶ್ರಮಿಕ್ ರೈಲಿನ ಮೂಲಕ ಕಳುಹಿಸಿಕೊಡುವ ಜವಾಬ್ದಾರಿಯನ್ನು ಖಜಾನೆ ಇಲಾಖೆಯ ಆಯುಕ್ತ ಉಜ್ವಲ್​ ಕುಮಾರ್​ ಅವರಿಗೆ ವಹಿಸಿಕೊಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.