ಬಾಗಲಕೋಟೆ: ಯುವಕ ಹಾಗೂ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿರುವ ಘಟನೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದಿದೆ.
23 ವರ್ಷದ ಆನಂದ್ ಹಾಗೂ 15 ವರ್ಷದ ಅಪ್ರಾಪ್ತೆ ಮೃತರು. ಇವರಿಬ್ಬರು ಮುಧೋಳ ತಾಲೂಕಿನ ಬರಗಿ ಗ್ರಾಮದವರಾಗಿದ್ದು, ಆನಂದ್ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೃತ ಬಾಲಕಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು. ನಿನ್ನೆ ಸಂಜೆ ಬಾಲಕಿ ಆನಂದ್ ಕೆಲಸ ಮಾಡುವ ಬೇಕರಿಗೆ ತೆರಳಿದ್ದಳು. ನಂತರ ಬಸವನಗರದ ಬಾಡಿಗೆ ರೂಂಗೆ ಹೋಗಿ ಮಿಸ್ ಯು ಅಪ್ಪ, ಅವ್ವ. ಮಿಸ್ ಯು ಪ್ರೆಂಡ್ಸ್ ಎಂದು ವಾಟ್ಸಪ್ ಸ್ಟೇಟಸ್ ಹಾಕಿ ನೇಣು ಬಿಗಿದುಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮುಧೋಳ ಠಾಣೆ ಪೊಲೀಸರು ತನಿಖೆ ಮುಂದುರಿಸಿದ್ದಾರೆ.