ಬಾಗಲಕೋಟೆ: ಅಂಬೇಡ್ಕರ ಜಯಂತಿ ಅಂಗವಾಗಿ ನವನಗರದ ಸೆಕ್ಟರ್ ನಂಬರ್ 49 ರಲ್ಲಿ ಡಿಎಸ್ಎಸ್ ( ಭೀಮವಾದ) ಸಂಘಟನೆ ವತಿಯಿಂದ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.
ಡಿಎಸ್ಎಸ್ ಮುಖಂಡರಾದ ಪರಶುರಾಮ ನೀಲನಾಯಕ ನೇತೃತ್ವದಲ್ಲಿ ಅಂಬೇಡ್ಕರ್ ಹಾಗೂ ಬುದ್ಧ ಮೂರ್ತಿಯನ್ನು ಪೂಜೆ, ಪುರಸ್ಕಾರ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ನಂತರ ಬೌದ್ಧಿಕ ಸ್ವಾಮೀಜಿಯವರ ಅವರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಜರುಗಿತು.
12 ಜೋಡಿಯ ದಂಪತಿಗಳಿಗೆ ಬುದ್ಧ ಮತ್ತು ಅಂಬೇಡ್ಕರ್ ಹಾಗೂ ತಾಮ್ರದ ಚಿಕ್ಕ ಬಿಂದಿಗೆ ಹಾಗೂ ಜಲವನ್ನು ನೀಡುವ ಮೂಲಕ ವಿವಾಹ ಜರುಗಿಸಲಾಯಿತು. ಇದೇ ಸಮಯದಲ್ಲಿ ಅಕ್ಷತಾವನ್ನು ಹಾಕದೆ ಹೂ ಸರ್ಮಪಣೆ ಮಾಡುವ ಮೂಲಕ ದಂಪತಿಗಳಿಗೆ ವಿಶೇಷ ವಾಗಿ ಆಶೀರ್ವಾದ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ನೀಲನಾಯಕ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ, ಇದರಿಂದ ಮುಂದುವರೆಯಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಆಶಯದಂತೆ ಗ್ರಾಮದಿಂದ ಹಿಡಿದು ಲೋಕಸಭೆಯವರೆಗೆ ಅಧಿಕಾರ ಹಿಡಿಯುವ ಮೂಲಕ ನಮ್ಮ ಜನಾಂಗ ಮುಂದುವರೆಯಬೇಕು.ಈ ನಿಟ್ಟಿನಲ್ಲಿ ಚುನಾವಣೆ ಸಮಯದಲ್ಲಿ, ಹೆಂಡ, ಹಣ, ಸೀರೆಗಳಿಗೆ ಆಶೆಯ ಪಡದೆ, ಸೂಕ್ತ ವ್ಯಕ್ತಗಳಿಗೆ ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಯುವ ಮುಖಂಡರಾದ ಸಂತೋಷ ಹೊಕ್ರಾಣಿ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭಕೋರಿದರು.