ETV Bharat / sports

ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ 'ವಂದೇ ಮಾತರಂ' ಎಂದ ರೋಹಿತ್​​... ಟ್ವೀಟ್​​​​​​​ ವೈರಲ್​​​ - ಮ್ಯಾಂಚೆಸ್ಟರ್

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ  ವಿರುದ್ಧ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಹಿಟ್​ಮ್ಯಾನ್​ ಪಂದ್ಯದ ಬಳಿಕ 'ವಂದೇ ಮಾತರಂ' ಎಂದು ಟ್ವೀಟ್​ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

Rohit sharma
author img

By

Published : Jun 17, 2019, 8:11 AM IST

Updated : Jun 17, 2019, 1:23 PM IST

ಮ್ಯಾಂಚೆಸ್ಟರ್​: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಹಿಟ್​ಮ್ಯಾನ್​ ಪಂದ್ಯದ ಬಳಿಕ 'ವಂದೇ ಮಾತರಂ' ಎಂದು ಟ್ವೀಟ್​ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯವೆಂದರೆ ಬಾರ್ಡರ್​ನಲ್ಲಿ ನಡೆಯುವ ಯುದ್ಧದಂತೆ ಕಾಣುವ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಕೊಹ್ಲಿ ಪಡೆ ಪಾಕ್​ ವಿರುದ್ಧ ಗೆಲುವಿನ ಉಡುಗೊರೆ ನೀಡಿತ್ತು. ಇದರ ಬೆನ್ನಲ್ಲೇ ಭರ್ಜರಿ ಶತಕ ಸಿಡಿಸಿದ ರೋಹಿತ್​ ಶರ್ಮಾ ತಮ್ಮ ಶತಕದ ಸಂಭ್ರಮದ ಫೋಟೋವನ್ನು ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ವಂದೇ ಮಾತರಂ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಟ್ವೀಟ್​ ವೈರಲ್​ ಆಗುತ್ತಿದ್ದು, ಸುಮಾರು 45 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದು, 6 ಸಾವಿರಕ್ಕೂ ಹೆಚ್ಚು ಜನರು ರೀ ಟ್ವೀಟ್ ಮಾಡಿಕೊಂಡಿದ್ದಾರೆ. ಇನ್ನು ಇನ್​ಸ್ಟಾಗ್ರಾಮ್​​​ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ.

ಪಾಕ್​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಕೇವಲ ​ 113 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 140 ರನ್ ಸಿಡಿಸಿದ್ದರು. ಅಲ್ಲದೆ ಮೊದಲ ವಿಕೆಟ್​ಗೆ ರಾಹುಲ್​ ಜೊತೆಗೆ 136 ರನ್​ಜೊತೆಯಾಟ ಹಾಗೂ ಎರಡನೇ ವಿಕೆಟ್​ಗೆ ಕೊಹ್ಲಿ ಜೊತೆ 102 ರನ್​ಗಳ ಜೊತೆಯಾಟ ನೀಡುವ ಮೂಲಕ ಪಾಕಿಸ್ತಾದ ವಿರುದ್ಧ ಅಬ್ಬರಿಸಿದ್ದರು.

Intro:Body:Conclusion:
Last Updated : Jun 17, 2019, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.