ಟೋಕಿಯೋ: ಉದಯೋನ್ಮುಖ ಕುಸ್ತಿಪಟು ರವಿ ಕುಮಾರ್ ದಹಿಯಾ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ 2020ರ ಒಲಿಂಪಿಕ್ಸ್ ಕೂಟದಲ್ಲಿ 4ನೇ ಪದಕ ಖಚಿಪಡಿಸಿದ್ದಾರೆ.
ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ದಾಖಲಿಸಿದರು. ಒಂದು ಹಂತದಲ್ಲಿ 7-9ರಲ್ಲಿ ಹಿನ್ನಡೆ ಅನುಭವಿಸಿದ್ದ ರವಿ ಎದುರಾಳಿಯನ್ನು ಕೆಳಗೆ(ಫಾಲ್) ಬೀಳಿಸುವ ಮೂಲಕ ಜಯ ತಮ್ಮದಾಗಿಸಿಕೊಂಡರು.
-
Proud of you #RaviKumar Go for Gold. Young boy you will create history for India in Olympic to win Gold medal🙏🏅🇮🇳#RaviKumarDahiya pic.twitter.com/36GmpupVN9
— TEAM SANGRAM U SINGH (@Sangram_Sanjeet) August 4, 2021 " class="align-text-top noRightClick twitterSection" data="
">Proud of you #RaviKumar Go for Gold. Young boy you will create history for India in Olympic to win Gold medal🙏🏅🇮🇳#RaviKumarDahiya pic.twitter.com/36GmpupVN9
— TEAM SANGRAM U SINGH (@Sangram_Sanjeet) August 4, 2021Proud of you #RaviKumar Go for Gold. Young boy you will create history for India in Olympic to win Gold medal🙏🏅🇮🇳#RaviKumarDahiya pic.twitter.com/36GmpupVN9
— TEAM SANGRAM U SINGH (@Sangram_Sanjeet) August 4, 2021
ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ತಂದುಕೊಡುತ್ತಿರುವ ದೇಶದ ಐದನೇ ಭಾರತೀಯ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 1952ರಲ್ಲಿ ಕೆ.ಡಿ ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದರು. ಅಲ್ಲದೇ ಸುಶೀಲ್ ಕುಮಾರ್ ನಂತರ ಫೈನಲ್ ತಲುಪಿದ 2ನೇ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾದರು.
ಕ್ವಾರ್ಟರ್ ಫೈನಲ್ನಲ್ಲಿ ದಹಿಯಾ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ಕೊಲಂಬಿಯಾದ ಟೈಗ್ರೇರೋಸ್ ಉರ್ಬಾನೋ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದರು.
2020ರ ಒಲಿಂಪಿಕ್ಸ್ನಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚನು, ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಮತ್ತು ಶಟ್ಲರ್ ಪಿವಿ ಸಿಂಧು ಈಗಾಗಲೇ ಭಾರತಕ್ಕೆ 3 ಪದಕ ತಂದುಕೊಟ್ಟಿದ್ದಾರೆ.
ಇದನ್ನು ಓದಿ:Tokyo Olympics Boxing: ಸೆಮೀಸ್‌ನಲ್ಲಿ ಸೋತರೂ ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ