ಟೋಕಿಯೋ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು, ಇದೀಗ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಸೆಮಿಫೈನಲ್ನಲ್ಲಿ ಅಜೆರ್ಬೈಜಾನ್ನ ಹಾಜಿ ಅಲಿಯೇವ್ ವಿರುದ್ಧ ನಡೆದ ಪಂದ್ಯದಲ್ಲಿ 5-12 ಅಂತರದಿಂದ ಸೋಲು ಕಂಡಿದ್ದಾರೆ.
-
#Tokyo2020 | Wrestler Bajrang Punia loses to Azerbaijan’s Haji Aliyev 5-12 in Men's 65kg Freestyle semi-final pic.twitter.com/6Gk5u19UJc
— ANI (@ANI) August 6, 2021 " class="align-text-top noRightClick twitterSection" data="
">#Tokyo2020 | Wrestler Bajrang Punia loses to Azerbaijan’s Haji Aliyev 5-12 in Men's 65kg Freestyle semi-final pic.twitter.com/6Gk5u19UJc
— ANI (@ANI) August 6, 2021#Tokyo2020 | Wrestler Bajrang Punia loses to Azerbaijan’s Haji Aliyev 5-12 in Men's 65kg Freestyle semi-final pic.twitter.com/6Gk5u19UJc
— ANI (@ANI) August 6, 2021
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಬಜರಂಗ್ ಪೂನಿಯಾ ಇರಾನ್‌ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲು ಮಾಡಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದರು.
ಇಂದೇ ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್ ಪುನಿಯಾ, ಮೊದಲ ರೌಂಡ್ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್, ಅಂತಿಮವಾಗಿ 2-1 ಅಂತರದಿಂದ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ, ಇದೀಗ ಸೆಮೀಸ್ನಲ್ಲಿ ಸೋಲು ಕಂಡಿದ್ದು, ಕಂಚಿಗಾಗಿ ಸೆಣಸಾಟ ನಡೆಸಲಿದ್ದಾರೆ.