ETV Bharat / sports

ದೇಶಕ್ಕಾಗಿ ಹಗಲಿರುಳು ದುಡಿದ ಕೊರೊನಾ ವಾರಿಯರ್ಸ್​ಗೆ ಈ ಪದಕ ಅರ್ಪಣೆ: ನಾಯಕ ಮನ್​ಪ್ರೀತ್​ ಸಿಂಗ್

author img

By

Published : Aug 5, 2021, 3:29 PM IST

Updated : Aug 5, 2021, 3:44 PM IST

ಜರ್ಮನಿ ವಿರುದ್ಧ ಪಂದ್ಯ ಗೆದ್ದ ನಂತರ ತಮ್ಮ ಸಂಭ್ರಮ ಹಂಚಿಕೊಳ್ಳುವ ಸಂದರ್ಭದಲ್ಲಿ ಮನ್​​ಪ್ರೀತ್ ಮಾತೇ ಹೊರಡದೇ ಮೂಕ ವಿಸ್ಮಿತರಾಗಿದ್ದರು. ಇದು ಭಾರತ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಪಡೆದ 12ನೇ ಹಾಕಿ ಪದಕವಾಗಿದೆ. 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಭಾರತ ಕೊನೆಯ ಬಾರಿ ಚಿನ್ನದ ಪದಕ ಪಡೆದಿತ್ತು.

dedicate this medal to COVID warriors
ಮನ್​ಪ್ರೀತ್ ಸಿಂಗ್

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಬರೋಬ್ಬರಿ 41 ವರ್ಷಗಳ ಬಳಿಕ ಪದಕ ಸಾಧನೆ ಮಾಡಿದೆ. ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಹಿನ್ನಡೆಯ ಹೊರತಾಗಿಯೂ ಅದ್ಭುತವಾಗಿ ತಿರುಗಿ ಬಿದ್ದು ಜರ್ಮನಿಯ ವಿರುದ್ಧ 5-4ರಲ್ಲಿ ಗೆಲುವು ಸಾಧಿಸಿದೆ. ಈ ಐತಿಹಾಸಿಕ ಸಾಧನೆಯನ್ನು ನಾಯಕ ಮನ್​​ಪ್ರೀತ್​ ಸಿಂಗ್​ ಕೋವಿಡ್​ 19 ಸಾಂಕ್ರಾಮಿಕ ಕಾಲದಲ್ಲಿ ದುಡಿದ ವೈದ್ಯರು, ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

ಭಾರತದ ರಾಷ್ಟ್ರೀಯ ಕ್ರೀಡೆ ಎಂದೆನಿಸಿಕೊಂಡಿದರೂ, 1980ರ ನಂತರ ಭಾರತ ತಂಡ ಸೆಮಿಫೈನಲ್​ ಕೂಡ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ದುರಂತ ಎಂದರೆ 2008ರ ಬೀಜಿಂಗ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಕೂಡ ವಿಫಲವಾಗಿತ್ತು.

ಆದರೆ 2012ರ ನಂತರ ಹಂತ ಹಂತವಾಗಿ ಭಾರತ ತಂಡ ಬಲಿಷ್ಠವಾಗುತ್ತಾ ಬಂದು ಕೊನೆಗೆ ಟೋಕಿಯೋದಲ್ಲಿ ಪದಕಕ್ಕೆ ಮುತ್ತಿಕ್ಕಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ 1-7ರ ಹಂತದಲ್ಲಿ ಸೋತರೂ ಎದೆಗುಂದದೇ ಮತ್ತೆ ಪುಟಿದೆದ್ದದ್ದು ಮಾತ್ರ ಎಂದಿಗೂ ಮರೆಯಲಾಗದ ಸಂಗತಿ.

ಜರ್ಮನಿ ವಿರುದ್ಧ ಪಂದ್ಯ ಗೆದ್ದ ನಂತರ ತಮ್ಮ ಸಂಭ್ರಮ ಹಂಚಿಕೊಳ್ಳುವ ಸಂದರ್ಭದಲ್ಲಿ ಮನ್​​ಪ್ರೀತ್ ಮಾತೇ ಹೊರಡದೇ ಮೂಕ ವಿಸ್ಮಿತರಾಗಿದ್ದರು. ಇದು ಭಾರತ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಪಡೆದ 12ನೇ ಹಾಕಿ ಪದಕವಾಗಿದೆ. 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಭಾರತ ಕೊನೆಯ ಬಾರಿ ಚಿನ್ನಕ್ಕೆ ಮುತ್ತಿಕ್ಕಿತ್ತು.

" ಈ ಕ್ಷಣ ಅದ್ಭುತವೆನಿಸುತ್ತಿದೆ, ನನಗೆ ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. 3-1ರಲ್ಲಿ ಹಿನ್ನಡೆಯಲ್ಲಿದ್ದೆವು. ಆದರೆ ಪಂದ್ಯದಲ್ಲಿ ನಾವು ಹಿಂತಿರುಗಿದ ರೀತಿ ಅದ್ಭುತ. ಖಂಡಿತ ನಾವು ಪದಕ ಪಡೆಯಲು ಅರ್ಹರು. ಕಳೆದ 15 ತಿಂಗಳು ಸಂಕಷ್ಟದ ಸಮಯದಲ್ಲೂ ನಾವು ಕಠಿಣವಾಗಿ ಕೆಲಸ ಮಾಡಿದ್ದೇವೆ.

ಬೆಂಗಳೂರಿನಲ್ಲಿ ನಮ್ಮಲ್ಲಿ ಕೆಲವರಿಗೆ ಕೋವಿಡ್​ ವೈರಸ್​ ಕೂಡ ತಗುಲಿತ್ತು" ಎಂದು ತರಬೇತಿಯ ವೇಳೆ ಪಟ್ಟ ಕಷ್ಟವನ್ನು ನೆನಪಿಸಿಕೊಂಡ ಮನ್​ಪ್ರೀತ್ ಸಿಂಗ್, ತಮ್ಮ ಈ ಪದಕವನ್ನು ಕೋವಿಡ್ ವಾರಿಯರ್ಸ್​ಗೆ ಸಮರ್ಪಿಸುವುದಾಗಿ ಹೇಳಿದರು.

ತುಂಬಾ ವರ್ಷಗಳ ನಂತರ ಈ ನಾವು ಪದಕವನ್ನು ಗೆದ್ದಿದ್ದೇವೆ. ಈಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ನಾವು ಒಲಿಂಪಿಕ್ಸ್​ನಲ್ಲಿ ಪೋಡಿಯಂ ​ ಏರಲಿದ್ದೇವೆ. ಮುಂದೆ ಎಲ್ಲೆ ನಡೆದರೂ ನಾವು ಖಂಡಿತ ಪೋಡಿಯಂ ಏರಲಿದ್ದೇವೆ ಎಂದು ಭಾವನಾತ್ಮಕವಾಗಿ ಹೇಳಿದರು.

ಇದನ್ನು ಓದಿ: ಹಾಕಿ ಸಾಧಕರಿಗೆ ತಲಾ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಪಂಜಾಬ್, ಮಧ್ಯಪ್ರದೇಶ

Last Updated : Aug 5, 2021, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.