ETV Bharat / sports

ಹೆತ್ತಮ್ಮನ ತಬ್ಬಿಕೊಂಡು ಕಣ್ಣೀರು ಹಾಕಿದ ಹಾಕಿ ಪ್ಲೇಯರ್​ ವಂದನಾ! - ವಂದನಾ ಕಟಾರಿಯಾ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಹ್ಯಾಟ್ರಿಕ್​ ಗೋಲು ಗಳಿಸಿ, ಭಾರತದ ಮಹಿಳಾ ತಂಡ ಸೆಮಿಫೈನಲ್​ಗೆ ಲಗ್ಗೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಾಕಿ ಆಟಗಾರ್ತಿ ವಂದನಾ ಅಮ್ಮನ್ನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.

Vandana Kataria
Vandana Kataria
author img

By

Published : Aug 11, 2021, 10:30 PM IST

ಹರಿದ್ವಾರ(ಉತ್ತರಾಖಂಡ): ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಮಹಿಳಾ ತಂಡ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರೂ ಅದ್ಭುತ ಪ್ರದರ್ಶನದ ಮೂಲಕ ಸೆಮಿಫೈನಲ್​​ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಇವರ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಕೂಡ ಶಹಬ್ಬಾಸ್​ಗಿರಿ ನೀಡಿದ್ದಾರೆ.

ಹೆತ್ತಮ್ಮನ ತಬ್ಬಿಕೊಂಡು ಕಣ್ಣೀರು ಹಾಕಿದ ಹಾಕಿ ಪ್ಲೇಯರ್​ ವಂದನಾ!

ಭಾರತಕ್ಕೆ ಬಂದಿರುವ ಮಹಿಳಾ ತಂಡಕ್ಕೂ ಈಗಾಗಲೇ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಸದ್ಯ ಆಟಗಾರ್ತಿಯರು ತಮ್ಮ ತಮ್ಮ ತವರು ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ತಂಡದ ಆಟಗಾರ್ತಿ ವಂದನಾ ಕಟಾರಿಯಾ ಕೂಡ ಉತ್ತರಾಖಂಡ್​ನ ಹರಿದ್ವಾರ್​ಕ್ಕೆ ತೆರಳಿದ್ದು, ಅಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ಹೆತ್ತಮ್ಮನ ನೋಡುತ್ತಿದ್ದಂತೆ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ವಂದನಾ ಹ್ಯಾಟ್ರಿಕ್​ ಗೋಲು ಸಿಡಿಸಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿರಿ: 'ಹೆಲಿಕಾಪ್ಟರ್'​ ಸಿದ್ಧಪಡಿಸಿದ 8ನೇ ಕ್ಲಾಸ್​ ಪಾಸಾದ ಮೆಕ್ಯಾನಿಕ್​... ಪರೀಕ್ಷೆ ವೇಳೆ ಅಪಘಾತ, ದುರ್ಮರಣ

ಇನ್ನು ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿರುವ ಘಟನೆ ಸಹ ನಡೆದಿತ್ತು. ಇದರ ಮಧ್ಯೆ ಕೂಡ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಗ್ರಾಮದ ಜನರು ವೆಲ್​ಕಮ್​ ಮಾಡಿಕೊಂಡಿದ್ದಾರೆ. ಜೊತೆಗೆ ಅವರನ್ನ ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಯಭಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.