ನವದೆಹಲಿ: ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಪದಕ ಗೆದ್ದು ತಾಯ್ನಾಡಿಗೆ ಹಿಂದಿರುಗಿರುವ ಮೂವರು ಅಥ್ಲೀಟ್ಸ್ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ದೆಹಲಿ ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ಅವರನ್ನ ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ಜಾವಲಿನ್ ಥ್ರೋನಲ್ಲಿ ಸುಮಿತ್ ಚಿನ್ನದ ಪದಕ ಗೆದ್ದಿದ್ದು, ಉಳಿದಂತೆ ದೇವೇಂದ್ರ ಹಾಗೂ ಯೋಗೀಶ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸುಮಿತ್ ಅಂತಿಲ್ 68.55 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರೆ, ದೇವೇಂದ್ರ ಎಫ್ 46 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಡಿಸ್ಕಸ್ ಎಸೆತದಲ್ಲಿ ಯೋಗೀಶ್ ಕತುನಿಯಾ ಎಫ್ 56 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರ ಸಾಧನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Medal winners at Tokyo Paralympics 2020 Sumit Antil, Devendra Jhajharia, Yogesh Kathunia return home amid a grand welcome and fanfare at Delhi airport.
— ANI (@ANI) September 2, 2021 " class="align-text-top noRightClick twitterSection" data="
Sumit won gold in javelin, while Devendra and Yogesh won silver in javelin and discus respectively. pic.twitter.com/uSFuPVrVW7
">Medal winners at Tokyo Paralympics 2020 Sumit Antil, Devendra Jhajharia, Yogesh Kathunia return home amid a grand welcome and fanfare at Delhi airport.
— ANI (@ANI) September 2, 2021
Sumit won gold in javelin, while Devendra and Yogesh won silver in javelin and discus respectively. pic.twitter.com/uSFuPVrVW7Medal winners at Tokyo Paralympics 2020 Sumit Antil, Devendra Jhajharia, Yogesh Kathunia return home amid a grand welcome and fanfare at Delhi airport.
— ANI (@ANI) September 2, 2021
Sumit won gold in javelin, while Devendra and Yogesh won silver in javelin and discus respectively. pic.twitter.com/uSFuPVrVW7
ನಿನ್ನೆ ತಡರಾತ್ರಿ ಟೋಕಿಯೋದಿಂದ ಒಟ್ಟು 10 ಅಥ್ಲೀಟ್ಸ್ಗಳು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಇಲ್ಲಿಯವರೆಗೆ 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿ 10 ಪದಕ ಗೆದ್ದಿದೆ.
ಇದನ್ನೂ ಓದಿರಿ: ಗುಡ್ ನ್ಯೂಸ್... BBMP ವ್ಯಾಪ್ತಿಯಲ್ಲಿ ದಿನದ 12 ಗಂಟೆ ಲಸಿಕಾ ಕೇಂದ್ರ ಓಪನ್