ಟೋಕಿಯೊ(ಜಪಾನ್): ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಗುರುವಾರ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಮಹಿಳಾ ಸಿಂಗಲ್ಸ್‌ನ ಗ್ರೂಪ್ ಎ ಗುಂಪಿನ ರೋಚಕ ಪಂದ್ಯದಲ್ಲಿ 3-1ರಿಂದ ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅವರನ್ನು ಸೋಲಿಸಿದ್ದಾರೆ.
ಐದು ಸುತ್ತುಗಳ ಆಟದಲ್ಲಿ 3-1 (11-7, 9-11, 17-15, 13-11) ಅಂತರದ ಗೆಲುವಿನೊಂದಿಗೆ ಭಾವಿನಾ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮೊದಲ ಸೆಟ್ನಲ್ಲಿ ಗೆದ್ದು, ಭಾವಿನಾ ಉತ್ತಮ ಆರಂಭ ಪಡೆದಿದ್ದರು. ಆದರೆ ಎರಡನೇ ಸೆಟ್ನಲ್ಲಿ ಸೋಲು ಅನುಭವಿಸಬೇಕಾಯಿತು. ಆದರೆ ಮೂರು ಮತ್ತು ನಾಲ್ಕನೇ ಸೆಟ್ಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಶಾಕ್ಲೆಟನ್ ಅವರನ್ನು ಮಣಿಸಿದ್ದಾರೆ.
ಬುಧವಾರ, ಭಾವಿನಾ ಚೀನಾದ ಟೇಬಲ್ ಟೆನ್ನಿಸ್ ಆಟಗಾರ್ತಿ ವಿರುದ್ಧ ಸೋಲು ಅನುಭವಿಸಿದ್ದರು. ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋತು ಪರಾಭವಗೊಂಡು A ಗುಂಪಿನ ಮೊದಲ ಪಂದ್ಯದಲ್ಲಿ ನೇರ ಸೆಟ್ಗಳಿಂದ ಸೋಲೊಪ್ಪಿಕೊಂಡಿದ್ದರು.
ಮತ್ತೋರ್ವ ಆಟಗಾರ್ತಿ ಸೋನಾಲ್ ಪಟೇಲ್ ಬುಧವಾರ ಚೀನಾದ ಕಿಯಾನ್ ಲಿ ವಿರುದ್ಧ ಸೋಲು ಅನುಭವಿಸಿದ್ದು, ಇಂದು ಕೊರಿಯಾದ ಮಿ ಗಿಯು ಲೀ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಲಾರ್ಡ್ಸ್ ಬಳಿಕ ಲೀಡ್ಸ್‌ನಲ್ಲೂ ಇಂಗ್ಲಿಷ್ ಅಭಿಮಾನಿಗಳ ಆಟಾಟೋಪ: ಸಿರಾಜ್ ಮೇಲೆ ಚೆಂಡು ಎಸೆದು ವಿಕೃತಿ