ಟೋಕಿಯೋ(ಜಪಾನ್): 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾ ಟೋಕಿಯೋ ಒಲಿಂಪಿಕ್ನ ಕುಸ್ತಿಪಂದ್ಯದಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
57 ಕೆ.ಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ದಹಿಯಾ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಮಣಿಸಿದ್ದಾರೆ. ಇದಕ್ಕೂ ಮೊದಲು ಕೊಲಂಬಿಯಾದ ಟೈಗ್ರೇರೋಸ್ ಉರ್ಬಾನೋ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದರು.
ಸೆಮಿಫೈನಲ್ನಲ್ಲಿ ಕಜಕಿಸ್ತಾನದ ನೂರಿಸ್ಲಮ್ ಸನಾಯೆವ್ ಅವರನ್ನು ಇಂದೇ ಎದುರಿಸಲಿದ್ದಾರೆ. ಈ ಮೂಲಕ ರವಿ ದಹಿಯಾ ಪದಕ ಗೆಲ್ಲುವ ಭರವಸೆಯ ಕಿರಣವಾಗಿದ್ದಾರೆ.
ಇದನ್ನೂ ಓದಿ: ಮಹಿಳಾ ಹಾಕಿ ತಂಡಕ್ಕೆ ಸೂರತ್ ವಜ್ರೋದ್ಯಮಿಯಿಂದ ವಿಶೇಷ ಬಹುಮಾನ ಘೋಷಣೆ