ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದಾರೆ. ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ಜು ಯಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ 18-21 ಹಾಗೂ 12-21 ಸೆಟ್ಗಳ ಅಂತರದಿಂದ ನಿರಾಸೆ ಅನುಭವಿಸಿದರು. ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.
-
India's PV Sindhu loses her SF match to Chinese Taipei's Tai Tzu-Ying 18-21, 12-21.
— SAIMedia (@Media_SAI) July 31, 2021 " class="align-text-top noRightClick twitterSection" data="
To fight for the Bronze medal against China's He Bing Jiao tomorrow at 5PM IST
#Badminton #Cheer4India #Olympics pic.twitter.com/E2fhh2HhJI
">India's PV Sindhu loses her SF match to Chinese Taipei's Tai Tzu-Ying 18-21, 12-21.
— SAIMedia (@Media_SAI) July 31, 2021
To fight for the Bronze medal against China's He Bing Jiao tomorrow at 5PM IST
#Badminton #Cheer4India #Olympics pic.twitter.com/E2fhh2HhJIIndia's PV Sindhu loses her SF match to Chinese Taipei's Tai Tzu-Ying 18-21, 12-21.
— SAIMedia (@Media_SAI) July 31, 2021
To fight for the Bronze medal against China's He Bing Jiao tomorrow at 5PM IST
#Badminton #Cheer4India #Olympics pic.twitter.com/E2fhh2HhJI
ಇಂದಿನ ಸೆಮಿಫೈನಲ್ ಸೋಲಿನಿಂದ ಸಿಂಧು ಚಿನ್ನದ ಪದಕ ಗೆಲುವ ಕನಸು ಭಗ್ನಗೊಂಡಿದ್ದು, ಫೈನಲ್ ರೇಸ್ನಿಂದ ಹೊರಬಿದ್ದಿದ್ದಾರೆ.ಈ ಹಿಂದೆ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ದಾಖಲು ಮಾಡಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದ ಬ್ಯಾಡ್ಮಿಂಟನ್ ತಾರೆ ಸಿಂಧು ಸೆಮೀಸ್ನಲ್ಲಿ ವೈಫಲ್ಯ ಅನುಭವಿಸಿದರು. ಮೊದಲೆರೆಡು ಸೆಟ್ಗಳಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.
ಈ ಹಿಂದೆ ಪಿ.ವಿ. ಸಿಂಧು ಹಾಗೂ ತೈ ಜು ಯಿಂಗ್ 18 ಬಾರಿ ಮುಖಾಮುಖಿಯಾಗಿದ್ದು,, ಇದರಲ್ಲಿ ತೈ ಜು ಯಿಂಗ್ 13 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ 5 ಗೆಲುವು ದಾಖಲಿಸಿದ್ದಾರೆ.