ಟೋಕಿಯೋ: ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಭಾರತದ ಮೇರಿ ಕೋಮ್ 16ನೇ ಸುತ್ತಿನ ಪಂದ್ಯದಲ್ಲಿ 3-2 ಅಂತರದಿಂದ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನ ಮುಗಿಸಿದ್ದಾರೆ. ಈ ಪಂದ್ಯದಲ್ಲಿ ಕೊಲಂಬಿಯಾ ಬಾಕ್ಸರ್ ಇಂಗ್ರಿಟ್ ವೇಲೆನ್ಸಿಯಾ ಗೆಲುವು ದಾಖಲು ಮಾಡಿದ್ದಾರೆ.
ಮಹತ್ವದ ಫ್ರೀ-ಕ್ವಾರ್ಟರ್ ಪಂದ್ಯದಲ್ಲಿ ಎದುರಾಳಿ ವಿರುದ್ಧ ಕೇವಲ 2-3 ಅಂತರದಿಂದ ಸೋಲು ಕಾಣುವ ಮೂಲಕ ಕೋಮ್ ನಿರಾಸೆ ಅನುಭವಿಸಿದ್ದಾರೆ.
-
💔 💔
— Boxing Federation (@BFI_official) July 29, 2021 " class="align-text-top noRightClick twitterSection" data="
London @Olympics 🥉medalist @MangteC put up a memorable fight but it wasn’t to be, fell short as she goes down 2-3 against Rio #Olympics 🥉medalist 🇨🇴's Ingrit V in Round of 16 match of @Tokyo2020 . #RingKeBaazigar#boxing#Tokyo2020#Cheer4India#TeamIndia pic.twitter.com/d5RKpusKN6
">💔 💔
— Boxing Federation (@BFI_official) July 29, 2021
London @Olympics 🥉medalist @MangteC put up a memorable fight but it wasn’t to be, fell short as she goes down 2-3 against Rio #Olympics 🥉medalist 🇨🇴's Ingrit V in Round of 16 match of @Tokyo2020 . #RingKeBaazigar#boxing#Tokyo2020#Cheer4India#TeamIndia pic.twitter.com/d5RKpusKN6💔 💔
— Boxing Federation (@BFI_official) July 29, 2021
London @Olympics 🥉medalist @MangteC put up a memorable fight but it wasn’t to be, fell short as she goes down 2-3 against Rio #Olympics 🥉medalist 🇨🇴's Ingrit V in Round of 16 match of @Tokyo2020 . #RingKeBaazigar#boxing#Tokyo2020#Cheer4India#TeamIndia pic.twitter.com/d5RKpusKN6
ಇಂಗ್ರಿಟ್ ವೇಲೆನ್ಸಿಯಾ 2016ರ ರಿಯೋ ಒಲಿಂಪಿಕ್ಸ್ನ ಕಂಚಿನ ಪದಕ ಗೆದ್ದಿದ್ದು, ಈ ಇಂದಿನ ಪಂದ್ಯದಲ್ಲೂ ಭಾರತೀಯ ಆಟಗಾರ್ತಿ ಮೇಲೆ ಅದ್ಭುತ ಪ್ರದರ್ಶನ ನೀಡಿ, ವಿಜಯಿಯಾದರು. 51 ಕೆಜಿ ವಿಭಾಗದ 16ನೇ ಸುತ್ತಿನ ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಇಂಗ್ರಿಟ್ ವೇಲೆನ್ಸಿಯಾ, ಎರಡನೇ ಸುತ್ತಿನಲ್ಲಿ ಸೋಲು ಕಂಡಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ ಕೊಲಂಬಿಯಾ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದರು.
ಇದನ್ನೂ ಓದಿ: Exclusive: ಒಲಿಂಪಿಕ್ಸ್‌ನಲ್ಲಿ ವಿರೋಚಿತ ಸೋಲು; ಟೇಬಲ್ ಟೆನಿಸ್ ಆಟಗಾರ ಶರತ್ ವಿಶೇಷ ಸಂದರ್ಶನ
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದ ಮೇರಿ ಕೋಮ್ ಇದೀಗ ನಿರಾಸೆಗೊಳಗಾಗಿದ್ದು, ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿದೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಡೊಮೊನಿಕಾದ ಆಟಗಾರ್ತಿಯನ್ನ ಸೋಲಿಸಿದ್ದ ಮೇರಿ ಪ್ರೀ ಕ್ವಾರ್ಟರ್ಗೆ ಲಗ್ಗೆ ಹಾಕಿದ್ದರು.
38 ವರ್ಷದ ಮೇರಿ ಕೋಮ್ಗೆ ಇದು ಬಹುತೇಕ ಕೊನೆ ಒಲಿಂಪಿಕ್ಸ್ ಆಗಿದ್ದು, ಎದುರಾಳಿ ವಿರುದ್ಧ ಗೆಲುವು ದಾಖಲು ಮಾಡುವಲ್ಲಿ ವಿಫಲರಾದರು. ಮೇರಿ ಕೋಮ್ಗೆ ನಾಲ್ಕು ಮಕ್ಕಳಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.